ಮಂಗಳೂರು: ಪಿ. ಎ. ತಾಂತ್ರಿಕ ಮಹಾವಿದ್ಯಾಲಯದ ರಾ. ಸೇ. ಯೋ. ಘಟಕದ 2016-17ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ತಾ.24.09.2016ರಂದು ಕಾಲೇಜಿನಲ್ಲಿ ಜರಗಿತ್ತು. ಬಲ್ಮಠ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಪ್ರೊ. ಚಂದ್ರಶೇಖರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

press-1-1

ವಿಶೇಷವಾಗಿ ವೃತ್ತಿಪರ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸಮಾಜಕ್ಕೆ ತಮ್ಮ ಸೇವೆಯನ್ನು ನೀಡುವಂತೆ ಕರೆನೀಡಿದರು ಹಾಗೂ ಸ್ವಚ್ಛಭಾರತದಿಂದ ಸ್ವಸ್ಥ ಭಾರತದ ನಿರ್ಮಾಣಕ್ಕೆ ಕೈಜೋಡಿಸುವಂತೆ ಕರೆನೀಡಿದರು. ಎ.ಪಿ.ಡಿ. ಫೌಂಡೇಶನ್‍ನ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ಲ ಎ. ರಹಮಾನ್ ಮುಖ್ಯ ಅತಿಥಿಯಾಗಿ ಹಾಜರಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ
ಡಾ. ಅಬ್ದುಲ್ ಶರೀಫ್ ಸಾಂದರ್ಭಿಕವಾಗಿ ಮಾತನಾಡಿದರು. ವಿವಿಧ ವಿಭಾಗದ ಮುಖ್ಯಸ್ಥರು ಹಾಜರಿದ್ದರು.

ಯೋಜನಾಧಿಕಾರಿಗಳಾದ ಪ್ರೊ. ಮುಸ್ಥಫಾ ಖಲೀಲ್ ಮತ್ತು ಪ್ರೊ. ಮನ್ಸೂರು ಅಹಮದ್ ಕಾರ್ಯಕ್ರಮ ಸಂಘಟಿಸಿದರು. ಪ್ರೊ. ಇಕ್ಬಾಲ್ ಮತ್ತು ಪ್ರೊ. ನಬೀಲ್ ಅಹಮದ್ ಸಹಕರಿಸಿದರು. ರಾ.ಸೇ.ಯೋ. ಘಟಕದ ವಿದ್ಯಾರ್ಥಿ ನಾಯಕ ಶಫೀಕ್‍ರವರು ಅತಿಥಿಗಳನ್ನು ಸ್ವಾಗತಿಸಿದರು. ಕುಮಾರಿ ಅಕ್ಷತಾ ಅತಿಥಿಗಳನ್ನು ಪರಿಚಯಿಸಿದರು, ಕುಮಾರಿ ಪ್ರಾರ್ಥನಾ ವಂದನಾರ್ಪಣೆಗೈದರು. ಕುಮಾರಿ ನೀತಿಕ ಕಾರ್ಯಕ್ರಮವನ್ನು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *