ಮೂಡುಬಿದಿರೆ: ಪ್ರಿಯಕರನನೊಂದಿಗೆ ಸೇರಿ ಗಂಡನ ಕೊಲೆ ಮಾಡಿ ಬಾವಿಗೆ ಎಸೆದಿರುವ ಘಟನೆ ಮೂಡುಬಿದಿರೆ ಸಮೀಪ ಮೂಡುಕೊಣಾಜೆ ಗ್ರಾಮದ ಕುಕ್ಕುದಕಟ್ಟೆಯಲ್ಲಿ ನಡೆದಿದೆ.
ಉಪ್ಪಿನಂಗಡಿ ಮೂಲದ ಜಯರಾಜ್(26) ಕೊಲೆಯಾದಾತ. ಈತ ಸೆ.16ರಂದು ಮೂಡುಕೊಣಾಜೆಯಲ್ಲಿರುವ ತನ್ನ ಹೆಂಡತಿ ಮನೆಗೆ ಬಂದಿದ್ದ. ಆತನ ಹೆಂಡತಿ ತನ್ನ ಪ್ರಿಯಕರನಿಗೆ ಗಂಡ ಬಂದ ವಿಷಯವನ್ನು ತಿಳಿಸಿದ್ದಾಳೆ. ಪ್ರಿಯಕರ ಆನಂದ್, ಜಯರಾಜ್‍ನ ಹೆಂಡತಿ ಮನೆಗೆ ಬಂದು ಕಬ್ಬಿಣದ ರಾಡ್‍ನಲ್ಲಿ ಜಯರಾಜ್‍ನನ್ನು ಹೊಡೆದು, ಕೊಲೆ ಮಾಡಿದ್ದಾನೆ. ಬಳಿಕ ಕಲ್ಲಿನಿಂದ ಶವವನ್ನು ಕಟ್ಟಿ ಗುರುವ ಎಂಬವರಿಗೆ ಸೇರಿದ ಬಾವಿಗೆ ಎಸೆದಿದ್ದಾನೆ ಎನ್ನಲಾಗಿದೆ.murder-1

img-20160924-wa0222

murder-2

ಜಯರಾಜ್ ನಾಪತ್ತೆ ಪ್ರಕರಣ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸುವಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಆನಂದನನ್ನು ಬಂಧಿಸಿರುವ ಮೂಡುಬಿದಿರೆ ಪೊಲೀಸರು ಶವವನ್ನು ಬಿಸಾಡಿರುವ ಬಾವಿಯಿರುವ ಸ್ಥಳಕ್ಕೆ ಶನಿವಾರ ಕರೆತಂದಿದ್ದರು. ಶವಕ್ಕೆ ಕಲ್ಲು ಕಟ್ಟಿರುವುದರಿಂದ ಮುಳುಗು ತಜ್ಞರು ಶವ ಮೇಲಕ್ಕೆತ್ತಲು ಹರಸಾಹಸ ಪಡುವಂತಾಗಿದೆ.

By suddi9

Leave a Reply

Your email address will not be published. Required fields are marked *