ಬಂಟ್ವಾಳ: ಬಂಟ್ವಾಳ ತಾಲೂಕು ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ತಂಡ ವೇಣೂರು ಸ.ಪ.ಪೂ.ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಿಗಳಾಗಿ ರಾಜ್ಯ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

mudupadukodi

ಈ ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲದಿದ್ದರೂ ಈ ಸಾಧನೆ ಮಾಡಿದ್ದು ಸಾರ್ವತ್ರಿಕ ಶ್ಲಾಘನೆಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿಗಳಾದ ಸುಜಯ್, ಸಮೀರ್, ಗಗನ್, ಅಜಯ್, ವೀಕ್ಷಿತ್, ದೀಕ್ಷಿತ್, ಅಶ್ವಿನ್, ನೆಬಿಲ್, ರಿತೇಶ್, ಸಾಹುಲ್, ಪ್ರೀತೇಶ್ ವಿಜೇತ ತಂಡದಲ್ಲಿದ್ದಾರೆ. ನಿತಿನ್ ಮೂರ್ಜೆ, ಪದ್ಮನಾಭ ಹಾಗೂ ರಫಿಕ್ ಅವರು ತರಬೇತಿ ನೀಡಿದ್ದು ಶಿಕ್ಷಕರಾದ ಸುನೀಲ್ ಸಿಕ್ವೇರ ಮತ್ತು ಅಮೃತಾ ಕೆ. ಮಾರ್ಗದರ್ಶನ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *