ಬಂಟ್ವಾಳ : ಛಾಯಾಚಿತ್ರಗ್ರಾಹಕರ ಬದುಕು ಪ್ರಸ್ತುತ ವಿದ್ಯಮಾನದಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಈಗಿನ ಡಿಜಿಟಲ್ ಯುಗದಲ್ಲಿ ಸ್ಪರ್ಧಾತ್ಮಕ ವೃತ್ತಿಯನ್ನು ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಿಂದ ಎಸ್.ಕೆ.ಪಿ.ಎ ಸದಸ್ಯರಿಗೆ ಉಚಿತ ವಿಮೆಯನ್ನು ನೀಡುವ ಕುರಿತು ಯೋಜನೆ ರೂಪಿಸಲಾಗುವುದು ಎಂದು ಅದಾನಿ ಫೌಂಡೇಶನ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ ಹೇಳಿದರು. ಅವರು ಪಣಂಬೂರಿನ ಜೆ.ಎನ್.ಸಿ ಹಾಲ್ ನಲ್ಲಿ ನಡೆದ ಅವಭಜಿತ ದ.ಕ.ಜಿಲ್ಲೆಯ ಎಸ್.ಕೆ.ಪಿ.ಎ ಯ 26ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘ ಸಂಸ್ಥೆಗಳಲ್ಲಿ ಸಣ್ಣ ಪುಟ್ಟ ಅಭಿಪ್ರಾಯ ಭೇದಗಳಿರುವುದು ಸಹಜ ಅದನ್ನೆಲ್ಲಾ ಮರೆತು ಸಂಘಟನೆಗಾಗಿ ಒಗ್ಗಟ್ಟಿನಲ್ಲಿ ದುಡಿದರೆ ಸಂಘಟನೆ ಬಲಗೊಳ್ಳುವುದು ಎಂದು ಎಸ್.ಕೆ.ಪಿ.ಎ ಯ ಕಾನೂನು ಸಲಹೆಗಾರರಾದ ಜಗ ದೀಶ ಶೇಣವ ನುಡಿದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ವಾಸುದೇವ ರಾವ್ ಶುಭ ಕೋರಿದರು.

0-63

0-31
ಪ್ರತಿಯೊಬ್ಬ ಛಾಯಾಚಿತ್ರ ಗ್ರಾಹಕನಲ್ಲೂ ಉತ್ತಮ ನಾಯಕತ್ವದ ಗುಣವಿದೆ ಅದನ್ನು ಸದುಪಯೋಗಪಡಿಸಲು ಎಸ್.ಕೆ.ಪಿ.ಎ ಒಂದು ಉತ್ತಮ ವೇದಿಕೆ. ಎಲ್ಲಾ ಸದಸ್ಯರು ತಮ್ಮ ವಲಯಗಳಲ್ಲಿ ಸದಸ್ಯರು ಮತ್ತು ಅವರ ಕುಟುಂಬದ ಕಷ್ಟ ಸುSಗಳಲ್ಲಿ ಭಾಗಿಯಾಗಿ ಸಮಾಜಮುಖಿ ಕೆಲಸ ಮಾಡಬೇಕೆಂದು ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ವಿಠಲ ಚೌಟ , ಸೋನಿ ಕಂಪನಿಯ ಪ್ರಶಾಂತ್ ಕುಪ್ಪಟ್ಟಿ, ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು , ಉಪಾಧ್ಯಕ್ಷ ವಿಲ್ಸನ್ ಗೋನ್ಸ್ವಾಲಿಸ್ ಶ್ರೀಧರ್ ಶೆಟ್ಟಿಗಾರ್, ಕೋಶಾಧಿಕಾರಿ ದಯಾನಂದ ಬಂಟ್ವಾಳ್ ಮತ್ತು 14 ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, ಸ್ವಾಗತಿಸಿ ಭಕ್ತಪ್ರಸಾದ್ ವಂದಿಸಿದರು. ಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು. ನಂತರ 26ನೇ ವಾರ್ಷಿಕ ಮಹಾಸಭೆಯು ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು. ಜತೆ ಕಾರ್ಯದರ್ಶಿ ವಿನೋದ್ ಕಾಂಚನ್ ವರದಿ ಹಾಗೂ ಕೋಶಾಧಿಕಾರಿ ದಯಾನಂದ್ ಬಂಟ್ವಾಳ್ ಲೆಕ್ಕಪತ್ರ ಮಂಡಿಸಿದರು. ಹಿರಿಯ ಛಾಯಾಚಿತ್ರ ಗ್ರಾಹಕ ಕುಂದಾಒಉರದ ರೋಬರ್ಟ್ ಮತ್ತು ಉಡುಪಿಯ ರಾಘವ ಪದ್ಮಶಾಲಿ ರವರನ್ನು ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *