ಮೂಡುಬಿದರೆ : ಕೆಲವೊಮ್ಮೆ ಸೇಲ್ಸ್ಮ್ಯಾನ್ಗಳ ಸೋಗಿನಲ್ಲಿ ಕಳ್ಳರು ಬಂದು ಮನೆ, ಅಂಗಡಿಮುಗ್ಗಟ್ಟುಗಳ ಪರೀಕ್ಷಿಸಿ ಹೋಗುತ್ತಾರೆ. ಕಳ್ಳತನದಂತಹ ಪ್ರಕರಣ ತಡೆಗಟ್ಟಲು ನೈಜ್ಯ ಸೇಲ್ಸ್ಮ್ಯಾನ್ಗಳಿಗೆ ಗುರುತಿನಚೀಟಿ ನೀಡುವ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಸ್ಥಳೀಯಾಡಳಿತ ಪ್ರಯತ್ನಿಸಬೇಕೆಂದು ಪುತ್ತಿಗೆ ಗ್ರಾಮಸ್ಥ ವಾದಿರಾಜ್ ಸಲಹೆ ನೀಡಿದರು.

mbd_june16_2 (4)

mbd_june16_2 (2)

mbd_june16_2 (3)

ಅವರು ಪುತ್ತಿಗೆ ಗ್ರಾಮ ಪಂಚಾಯಿತಿ ಮತ್ತು ಮೂಡುಬಿದರೆ ಪೊಲೀಸ್ ಇಲಾಖೆಯ ವತಿಯಿಂದ ಪಂಚಾಯಿತಿ ಸಭಾಭವನದಲಿಸೋಮವಾರ ನಡೆದ ಪೊಲೀಸ್-ಜನಸಂಪರ್ಕ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ, ಹಗಲಿನಲ್ಲಿ ಬರುವ ಸೇಲ್ಸ್ಮ್ಯಾನ್ಗಳ ಬಗ್ಗೆ ಗಮನವಿರಲಿ ಅವರ ಸಂಸ್ಥೆಗಳು ನೀಡುವ ಗುರುತಿನ ಚೀಟಿಗಳನ್ನು ಗಮನಿಸಿ, ಅಪರಿಚಿತರು ವಾಹನಗಳಲ್ಲಿ ಬಂದಾಗ ವಾಹನ ಮತ್ತು ವ್ಯಕ್ತಿಗಳ ಬಗ್ಗೆ ನಿಗಾ ವಹಿಸಿ ವಾಹನಗಳ ನಂಬರ್ಗಳನ್ನು ನೋಟ್ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಸ್ಥಳೀಯಾಡಳಿತ ಗುರುತುಚೀಟಿ ನೀಡುವ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಜಿ.ಪಂಗೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಪಂಚಾಯಿತಿ ಸದಸ್ಯರು ತಿಳಿಸಿದರು.

ಅಪರಿಚಿತರ ಬಗ್ಗೆ ನಿಗಾ:
ಊರಿಗೆ ಸೇಲ್ಸ್ ರೆಪ್ಗಳು ಅಥವಾ ಯಾರಾದರೂ ಅಪರಿಚಿತರು ಬಂದರೆ ಅವರ ಚಲನವಲನಗಗಳ ಬಗ್ಗೆ ನಿಗಾ ಇಡಿ. ಅನುಮಾನಾಸ್ಪದ ವಾಹನಗಳು ಓಡಾಡುತ್ತಿದ್ದರೆ ನಂಬರ್ ನೋಟ್ ಮಾಡಿ ಪೊಲೀಸರಿಗೆ ತಿಳಿಸಿ. ಅಪರಿಚಿತರರಿಗೆ ಮನೆ ಬಾಡಿಗೆಗೆ ಕೊಡುವಾಗ ಅವರ ವಿಳಾಸ ಹಾಗೂ ಫೊಟೊ ಸಂಗ್ರಹಿಸಿ ಪೊಲೀಸರಿಗೆ ನೀಡಿ. ಮುಖ್ಯ ರಸ್ತೆಯ ಪ್ರಮುಖ ಕಡೆಗಳಲ್ಲಿ ಪಂಚಾಯತ್ ವತಿಯಿಂದ ಸಿ.ಸಿ ಕೆಮರಾ ಅಳವಡಿಸಿ. ಅಪರಾಧಗಳು ಸಂಭವಿಸಿದಾಗ ಆರೋಪಿಗಳನ್ನು ಪತ್ತೆ ಹಚ್ಚಲು ಇದು ಸಹಕಾರಿಯಾಗುತ್ತದೆ ಎಂದು ಇನ್ಸ್ಪೆಕ್ಟರ್ ಹೇಳಿದರು.

ಯುವಕರನ್ನು ನೀಡಿ:
ಮೂಡುಬಿದರೆಯು ಅತೀ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶವಾಗಿದೆ. ಪೊಲೀಸ್ ಠಾಣೆಯಲ್ಲಿ ಇರುವ ಪೊಲೀಸ್ ರ ಸಂಖ್ಯೆ ಕಡಿಮೆ ಇರುವುದರಿಂದ ಪೊಲೀಸರು ಎಲ್ಲಾ ಕಡೆಗಳಲ್ಲಿ ರಾತ್ರಿ ಗಸ್ತು ತಿರುಗಲು ಸಾಧ್ಯವಿಲ್ಲ ಅದಕ್ಕಾಗಿ ತಮ್ಮ ತಮ್ಮ ಏರಿಯಾಗಳಲ್ಲಿ 20 ಯುವಕರನ್ನು ನೀಡಿದರೆ ಅವರಿಗೆ ಪೊಲೀಸ್ ಠಾಣೆಯಿಂದ ಗುರುತಿನ ಚೀಟಿ ನೀಡಿ ಗಸ್ತು ತಿರುಗಲು ಅವಕಾಶ ಮಾಡಿಕೊಡಲಾಗುತ್ತದೆ. ಇದಲ್ಲದೆ ಪಂಚಾಯತ್ ಸದಸ್ಯರು ಕೂಡಾ ಪಂಚಾಯತ್ಗೆ ಬರುವ ಜನರಿಗೆ, ರೇಷನ್ ಅಂಗಡಿಗಳಲ್ಲಿ ಶಾಲಾ ಮಕ್ಕಳಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಇದರಿಂದಾಗಿ ಗ್ರಾಮದ ಜನತೆ ಎಚ್ಚೆತ್ತುಕೊಂಡಂತಾಗುತ್ತದೆ ಜನರು ಎಚ್ಚೆತ್ತುಕೊಂಡರೆ ಮಾತ್ರ ಆ ಊರಿನಲ್ಲಿ ಕಳ್ಳತನ ಪ್ರಕರಣಗಳು ಕಡಿಮೆಯಾಗುತ್ತದೆ ಎಂದ ಅನಂತ ಪದ್ಮನಾಭ ಸಲಹೆ ನೀಡಿದರು.

ಪೊಲೀಸ್ ಠಾಣೆಗೆ ದೂರು ಕೊಡಲು ಬಂದವರನ್ನು ಬಡವರು ಮತ್ತು ಶ್ರೀಮಂತರು ಎಂದು ತಾರತಮ್ಯ ಮಾಡದೆ ಸಮಾನ ನ್ಯಾಯ ಕೊಡಬೇಕು. ಆದರೆ ಮೂಡುಬಿದಿರೆ ಪೊಲೀಸ್ಠಾಣೆಯಲ್ಲಿ ಕೆಲವು ಪೊಲೀಸರು ಬಡವರ ದೂರುಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದರ ಜತೆಗೆ ಅವರೊಂದಿಗೆ ಕೆಟ್ಟದ್ದಾಗಿ ವತರ್ಿಸುತ್ತಾರೆ ಎಂಬ ಆರೋಪ ಸೋಮವಾರ ಪುತ್ತಿಗೆ ಪಂಚಾಯತ್ ಸಭಾಭವನದಲ್ಲಿ ನಡೆದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಆರೋಪ ಕೇಳಿಬಂತು.
ಸಭೆಯ ಅಧ್ಯಕ್ಷತೆಯನ್ನು ಪಂ. ಅಧ್ಯಕ್ಷ ಉಮನಾಥ ಕಕರ್ೇರಾ ವಹಿಸಿದರು. ತಾಲ್ಲೂಕು ಪಂಚಾಯತ್ ಸದಸ್ಯ ಪ್ರಕಾಶ್ ಈ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿ ಜನಸಾಮಾನ್ಯರೂ ಪೊಲೀಸ್ಠಾಣೆಗೆ ಬಂದು ನ್ಯಾಯ ಪಡಕೊಳ್ಳುವಂತಹ ವಾತಾವರಣ ನಿಮರ್ಾಣವಾದಾಗ ಇಲಾಖೆ ಬಗ್ಗೆ ಸಾರ್ವಜನಿಕರಿಗೂ ಗೌರವ ಉಂಟಾಗುತ್ತದೆ. ಕಳ್ಳತನ ಇನ್ನಿತರ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಜನ ಪೊಲೀಸರಿಗೆ ಸಹಕಾರ ನೀಡುತ್ತಾರೆ ಎಂದರು. ಈ ರೀತಿ ತಾರತಮ್ಯ ಆಗಿರುವುದು ನನಗೆ ಗೊತ್ತಾಗಿಲ್ಲ. ಅಂತದಕ್ಕೆ ನಾನು ಅವಕಾಶ ಕೊಡವುದಿಲ್ಲ. ಮುಂದೆ ಯಾರಿಗಾದರು ಸಮಸ್ಯೆ ಆಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಸರಿಪಡಿಸುತ್ತೇನೆ ಎಂದು ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಉತ್ತರಿಸಿದರು.

ಹಲವು ಕಡೆಗಳಲ್ಲಿ ಹಟ್ಟಿಯಿಂದಲೇ ದನಗಳನ್ನು ಕದ್ದು ಒಯ್ಯುತ್ತಿರುವುದರ ಬಗ್ಗೆ ರವೀಂದ್ರ ಅವರು ಪೊಲೀಸರ ಗಮನಕ್ಕೆ ತಂದಾಗ ಕೆಲವು ಕಡೆಗಳಲ್ಲಿ ಬ್ಯಾರಿಗೇಡ್ಗಳನ್ನು ಹಾಕಲಾಗಿದೆ ಇದರಿಂದಾಗಿ ಕಳ್ಳರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಈ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಗಮನಹರಿಸಲಾಗುವುದು ಎಂದರು.

ಗ್ರಾ,ಪಂ ಅಧ್ಯಕ್ಷ ಉಮಾನಾಥ ಕಕರ್ೇರಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾ.ಪಂ ಸದಸ್ಯ ಪ್ರಕಾಶ್.ಪಿ. ಉಪಾಧ್ಯಕ್ಷೆ ಜ್ಯೋತಿ ಮತ್ತು ಪಂಚಾಯತ್ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಂಚಾಯಿತಿ ಸಿಬಂದಿ ಸಂಜೀವ ನಾಯ್ಕ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಶಶಿಧರ ನಾಯಕ್ ವಂದಿಸಿದರು.

By suddi9

Leave a Reply

Your email address will not be published. Required fields are marked *