ವಿಟ್ಲ: ಪಡ್ನೂರು ಗ್ರಾಮದ ಕಡಂಬು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಪ್ರದೀಪ್ ಗೌಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ. ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜೆ. ಆರ್. ಡಿಸೋಜಾ ಹಾಗೂ ನಿಯೋಜಿತ ಅಧಿಕಾರಿ ಪ್ರತಿಭಾ ಭಾಗವಹಿಸಿ ಒಕ್ಕೂಟದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

3

ಸಂಘದ ಉಪಾಧ್ಯಕ್ಷೆ ಪುಷ್ಪಾ, ನಿರ್ದೇಶಕರುಗಳಾದ ಬಾಲಪ್ಪ ಗೌಡ, ವೆಂಕಪ್ಪ ಮೂಲ್ಯ, ಬೆನಡಿಕ್ಟ್ ಪಿಂಟೊ, ಭಾಸ್ಕರ ಕೊಟ್ಟಾರಿ. ಲಿಂಗು, ಪಾರ್ವತಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ತೇಜಶ್ರೀ, ಪ್ರದೀಪ ಗೌಡ ಇವರಿಗೆ ವಿಶೇಷ ಬಹುಮಾನ ಮತ್ತು ಹಾಲು ಹಾಕುತ್ತಿರುವ ಎಲ್ಲಾ ಸದಸದ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಸಂಘದ ಕಾರ್ಯದರ್ಶಿ ರಾಘವ ಗೌಡ ಬನ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ನಿದೇಶಕ ಅಲ್ಬರ್ಟ್ ಲಸ್ರಾದೊ ವಂದಿಸಿದರು.

By suddi9

Leave a Reply

Your email address will not be published. Required fields are marked *