ಮೂಡುಬಿದಿರೆ: ಮದರ್ ತೆರೇಸಾ ಅವರಿಗೆ ಕ್ರೈಸ್ತರ ಪರಮೋಚ್ಚ ಧರ್ಮಗುರುಪೋಪ್ ಫ್ರಾನ್ಸಿಸ್‍ರವರು ಭಾನುವಾರ ರೋಮ್‍ನ ವ್ಯಾಟಿಕನ್‍ನಲ್ಲಿ ಸಂತ ಪದವಿ ಪ್ರದಾನ ಮಾಡವಾದ ಸಂದರ್ಭ ಮೂಡುಬಿದಿರೆಯ ರಾಜೀವ್ ಗಾಂಧಿ ಕಾಂಪ್ಲೆಕ್ಸ್‍ನ ಮುಂಭಾಗದಲ್ಲಿ ಗೌರವಾರ್ಪಣೆ ಮಾಡಲಾಯಿತು. ಉದ್ಯಮಿ ಅಶ್ವಿನ್ ಜೆ. ಪಿರೇರಾ ಹಾಗೂ ಮೂಡುಬಿದಿರೆ ವಲಯ ಐಸಿವೈಎಮ್ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಕಾರ್ಯದಲ್ಲಿ ಸಂತ ಪದವಿ ಪ್ರದಾನದ ನೇರ ಪ್ರಸಾರವನ್ನು ಪ್ರದರ್ಶಿಸಲಾಯಿತು.

St. Mother Teressa  (1)

St. Mother Teressa  (3)

St. Mother Teressa  (4)

St. Mother Teressa  (5)

St. Mother Teressa  (6)

St. Mother Teressa  (9)

St. Mother Teressa  (10)

St. Mother Teressa  (12)

ಹಿರಿಯ ಧರ್ಮಗುರುಗಳಾದ ರೆ.ಫಾ ಮಾರ್ಕ್ ವಾಲ್ಡರ್, ಸೇವೆಯ ಸಂದೇಶವನ್ನು ವಿಶ್ವಕ್ಕೆ ಸಾರಿದವರು ಮದರ್ ತೆರೇಸಾ. ಅವರು ಮಾಡುತ್ತಿದ್ದ ದೀನ ದಲಿತರ ಸೇವೆ ಅನನ್ಯವಾದದ್ದು. ಸರ್ವಧರ್ಮದವರು ಮದರ್ ತೆರೇಸಾ ಅವರಿಗೆ ಗೌರವ ನೀಡುತ್ತಿರುವುದು ಅವರ ಸೇವಾ ಗುಣಕ್ಕೆ ಸಾಕ್ಷಿಯಾಗಿದೆ ಎಂದರು. ಶಾಸಕ ಮತ್ತು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಮದರ್ ತೆರೇಸಾ ಅವರಿಗೆ ಸಂತ ಪದವಿ ಸಿಕ್ಕಿರುವುದು ಭಾರತಕ್ಕೆ ಹೆಮ್ಮೆಯ ವಿಷಯ. ಅವರ ಸೇವಾ ಗುಣದ ಪರಂಪರೆಯನ್ನು ಮುಂದುವರಿಸುವಂತಾಗಬೇಕು ಎಂದರು.
ಗಂಟಾಲ್ಕಟ್ಟೆ ಚರ್ಚ್ ಧರ್ಮಗುರು ರೆ.ಫಾ ಜೇಸುದಾಸ್ ಡಿ’ಕೋಸ್ತಾ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಮೂಡುಬಿದಿರೆ ಪುರಸಬಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಅಶ್ವಿನ್ ಜೆ.ಪಿರೇರಾ ಪ್ರಾಸ್ತಾವಿಕವಾಗಿ ಮೂಡುಬಿದಿರೆ ವಲಯ ಐಸಿವೈಎಂ ಅಧ್ಯಕ್ಷ ಜೈಸನ್ ಪಿರೇರಾ ಸ್ವಾಗತಿಸಿದರು. ಆಲ್ವಿನ್ ಅಗ್ರಾರ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *