ಬಂಟ್ವಾಳ: ಅಯುಷ್ ಇಲಾಖೆಯ ಸಹಯೋಗ ದೊಂದಿಗೆ ಸಜೀಪ ಮುನ್ನೂರು ಗ್ರಾಮದ ಶಾಂತಿನಗರ ಶಾಲೆಯ ಸಭಾಂಗಣದಲ್ಲಿ ವಿಶ್ವ ಪೌಷ್ಠಿಕ ಆಹಾರ ಸಪ್ತಾಹ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಪ್ರಭಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಬಿ.ಭಾರತಿ, ಆಯುಷ್ ವೈದ್ಯಾಧಿಕಾರಿ ಮಣಿಕರ್ಣಿಕ, ಪಂ. ಸದಸ್ಯರು, ಅಂ. ಸಮನ್ವಯ ಸಮಿತಿ ಅಧ್ಯಕ್ಷೆ ಸುಮತಿ, ಅಂ. ಕಾರ್ಯಕರ್ತೆ ಹೇಮಲತಾ, ವನಜಾಕ್ಷಿ ಉಪಸ್ಥಿತರಿದ್ದರು.
