ಕೈಕಂಬ: ಅಡ್ಡೂರು 30 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವವು ಸೆ.5 ರಂದು ಸೋಮವಾರ ಜರಗಲಿದೆ. ಬೆಳಗ್ಗೆ 7 ಗಂಟೆಗೆ ವಿಘ್ನೇಶ್ವರನ ದೇವರ ವಿಗ್ರಹವು ಕಿನ್ನಿಕಂಬಳ ಶ್ರೀ ರಾಧ ಕೃಷ್ಣ ಭಜನಾ ಮಂದಿರದಿಂದ ಅಡೂರಿನ ಬೆನಕ ಮಂಟಪಕ್ಕೆ ಮೆರವಣಿಗೆಯಲ್ಲಿ ತರಲಾಗುವುದು. ಬೆಳಗ್ಗೆ 9.30 ಕ್ಕೆ ಪೊಳಲಿ ಪವಿತ್ರ ಪಾಣಿ ಮಾಧವ ಭಟ್ “ವಿಗ್ರಹ ಪ್ರತಿಷ್ಟೆ” ನೆರವೇರಿಸಲಿದ್ದಾರೆ.10 ಗಂಟೆಯಿಂದ ನಾನಾ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, 12 ಗಂಟೆಗೆ ಗಣಹೋಮ ಪೂರ್ಣಾಹುತಿ. 12.30 ಕ್ಕೆ ಮಹಾಪೂಜೆ. ಮರ್ಧಯಾಹ್ನ 1.30 ರಿಂದ ಯಕ್ಷಗಾನ “ಶ್ರೀ ಕೃಷ್ಣ ಲೀಲೆ ಕಂಸ ವಧೆ” ಸಂಜೆಗಂಟೆ 5 ಕ್ಕೆ ಸಭಾ ಕಾರ್ಯಕ್ರಮ. 6.3ರಿಂದ ಮಕ್ಕಳ ಸಾಂಸ್ಕೃ ತಿಕ ಕಾರ್ಯಕ್ರಮ. ರಾತ್ರಿ 7.30ರಿಂದ ಶೋಭಾಯಾತ್ರೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *