ಬಂಟ್ವಾಳ: ಮನಸ್ಸುಗಳನ್ನು ಆರೋಗ್ಯಕರವಾಗಿಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಪರ್ಯಾಯ ಶಿಕ್ಷಣದ ಅವಶ್ಯಕತೆ ಇದೆ ಎಂದು ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಝೇವಿಯರ್ ಡಿಸೋಜ ಹೇಳಿದ್ದಾರೆ. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ರಜತವರ್ಷಾಚರಣೆ ಸಂಭ್ರಮದಲ್ಲಿ ಅರಿವು ಯುವ ಸಂವಾದ ಕೇಂದ್ರ, ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ , ಸಾರಂಗ ಸಮುದಾಯ ಬಾನುಲಿ ಕೇಂದ್ರದ ಆಶ್ರಯದಲ್ಲಿ ಶನಿವಾರ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್ ನಲ್ಲಿ ನಡೆದ ಯುವಜನರ ಪ್ರತಿಭಾನ್ವೇಷಣಾ ಸ್ಪರ್ಧಾ ವಿಜೇತರಿಗೆ ಅಭಿನಂದನಾ ಸಮಾರಂಭ “ಯುವಾಭಿವ್ಯಕ್ತಿ-2016” ಯಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.1 (4)

ಅರಿವು ಬಳಗ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಜೊತೆಯಾಗಿ ಮನಸ್ಸು ಕಟ್ಟುವ ಕಾರ್ಯಗಳನ್ನು ನಡೆಸುತ್ತಿರುವುದು ಅಭಿನಂದನಾರ್ಹ ಎಂದ ಅವರು, ವಿದ್ಯಾರ್ಥಿಗಳು ವಿದ್ಯಾರ್ಜನೆಯ ಹೊಸ್ತಿಲಲ್ಲಿ ಮಾನವೀಯತೆಯನ್ನು ಬೆಳೆಸುವ ದಿಟ್ಟ ಹೆಜ್ಜೆ ಇಡಬೇಕು ಎಂದರು. ಪ್ರತೀ ವಿಚಾರದಲ್ಲೂ ನಮ್ಮತನವನ್ನು ಉಳಿಸಿಕೊಳ್ಳಬೇಕು ,ಮನಸ್ಸುಗಳನ್ನು ಕೆಡಿಸುವ ಕಾರ್ಯಗಳಿಂದ ದೂರವಿರಿ ಎಂದು ಸಲಹೆ ನೀಡಿದರು.
ಬಂಟ್ವಾಳ ಬಿ.ಮೂಡ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ ಬಿ. ಯವರು ಮುಖ್ಯ ಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿಗಳೇ ಭವಿಷ್ಯದ ಆಶಾಕಿರಣಗಳಾಗಿದ್ದು, ಕಲಿಕೆಯ ಜೊತೆಗೆ ಇತರರಿಗೆ ಮಾದರಿಯಾಗುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದರು. ರಜತವರ್ಷಾಚರಣಾ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಡ್ಕಸ್ಥಳ ಮಾತನಾಡಿ, ಕಾಲೇಜು ಜೀವನ ನಮ್ಮ ಬದುಕಿನ ಮುಖ್ಯ ಘಟ್ಟವಾಗಿದ್ದು, ಅಲ್ಲಿನ ನಮ್ಮ ಹವ್ಯಾಸ, ಆಯ್ಕೆಗಳು ಬದುಕಿನ ಪಥವನ್ನೇ ಬದಲಿಸುತ್ತದೆ. ಇಂತಹಾ ಸನ್ನಿವೇಶದಲ್ಲಿ ನಾವು ಜಾಗೃತರಾಗಿರಬೇಕು ಎಂದರು.
ರಜತ ವರ್ಷಾಚರಣಾ ಸಮಿತಿ ಸಂಚಾಲಕ ವೆಂಕಟೇಶ್ ಬಂಟ್ವಾಳ, ಅರಿವು ಸಂಸ್ಥೆಯ ಒಡನಾಡಿ ಶ್ವೇತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಸ್ವಾಗತಿಸಿದರು. ಪ್ರೆಸ್‍ಕ್ಲಬ್ ಉಪಾಧ್ಯಕ್ಷ ರತ್ನದೇವ್ ಪೂಂಜಾಲಕಟ್ಟೆ ವಂದಿಸಿದರು. ಅರಿವು ಸಂಸ್ಥೆಯ ಯೂತ್ ಮೆಂಟರ್ ನಾದ ಮಣಿನಾಲ್ಕೂರು ಪ್ರಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *