ಬಂಟ್ವಾಳ : ಇತ್ತೀಚಿನ ಕೆಲವು ದಿನಗಳಲ್ಲಿ ಫೇಸ್ ಬುಕ್ ಮತ್ತಿತರ ಜಾಲತಾಣಗಳಲ್ಲಿ ಮತೀಯ ಶಕ್ತಿಗಳು ಕೋಮು ದ್ವೇಷದ ಕಿಚ್ಚು ಹಚ್ಚುವ ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ದ.ಕ.ಜಿಲ್ಲೆಯ ಪವಿತ್ರ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಬಗ್ಗೆ ಅಶ್ಲೀಲವಾಗಿ ನಿಂದಿಸಿದವರನ್ನು ಕೂಡಲೇ ಪತ್ತೆ ಹಚ್ಚಿ ಬಂದಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್ ಸಮಿತಿ ಬಂಟ್ವಾಳ ನೇತೃತ್ವದ ನಿಯೋಗವು ಬಂಟ್ವಾಳ ವಿಭಾಗ ಡಿವೈಎಸ್ಪಿ ರವೀಶ್ ಸಿ.ಆರ್ ರವರಿಗೆ ಮನವಿ ಸಲ್ಲಿಸಿತು.

ಬಂ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿಲ್ಲಾ ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್ , ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ , ಐಡಾ ಸುರೇಶ್, ಮಹೇಶ್ ನಾಯಕ್ , ಮಹಮ್ಮದ್ ನಂದಾವರ, ಲುಕ್ಮಾನ್, ಜ ಗದೀಶ್, ಶಂಕರ್ ಕಾಯರ್ ಮಾರ್, ಪ್ರಶಾಂತ್ ಆಲ್ವಿನ್, ಮಜಿದ್ ಕನ್ಯಾನ, ಪ್ರವೀಣ್ ಕಿಣಿ, ಶಿವಪ್ರಸಾದ್ ಕನಪಾಡಿ , ರಮೇಶ್ ಪಣೋಲಿಬೈಲ್ ಹಾಗೂ ಯುವ ಕಾಂಗ್ರೆಸ್ ಬಂಟ್ವಾಳ ಸಮಿತಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
