ಕೈಕಂಬ: ಬೆಳ್ತಂಗಡಿ ತಾಲೂಕಿನ   ಪಡಂಗಡಿ ನಿವಾಸಿ   ನಿವೃತ ಮುಖ್ಯ ಶಿಕ್ಷಕ  ಪಿ .ನಾರಾಯಣ ಮೊಯಿಲಿ (78) ಅವರು ತನ್ನ ಸ್ವಗ್ರಹದಲ್ಲಿ ನಿಧನರಾದರು . ಇವರು ಪತ್ನಿ ರತ್ನಾವತಿ   ಸಹಿತ    5 ಜನ ಪುತ್ರಿಯರನ್ನು ಮತ್ತು ಅಳಿಯಂದಿರನ್ನು ಹಾಗೂ ಮೊಮ್ಮಕ್ಕಳನ್ನು ಹಾಗೂ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ.222

ಅವರು ಹಲವು ಕಡೆಗಳಲ್ಲಿ ಶಿಕ್ಷಕ ವೃತ್ತಿಯಲ್ಲಿ  ಸಾವಿರಾರು ಶಿಷ್ಯಂದಿರನ್ನು  ಹೊಂದಿದ್ದರು.  ಕುಪ್ಪೆಟ್ಟ, ಪದ್ಮುಂಜೆ ನಾಳ, ಪಡಂಗಡಿ, ಹಳೆಪೇಟೆ, ಉಜಿರೆ ಫ್ರೌಡ ಶಾಲೆಗಳಲ್ಲಿ ಸೇವೆ ಸಲ್ಲಿಸಿದರು,. ದೇವಾಡಿಗ ಸೇವಾ ವೇದಿಕೆ ವೇಣೂರು ಇದರ ಸ್ಥಾಪಕ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.  ಅವರ ನಿಧನಕ್ಕೆ  ರಾಜಕೀಯ ಮುಖಂಡರು , ಹಲಾವರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಊರಿನ ಅನೇಕ ಹಿತೈಸಿಗಳು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *