ಮಂಜೇಶ್ವರ: ಕಾರ್ಯನಿರತ ಪತ್ರಕರ್ತರ ಸಂಘ ಮಂಜೇಶ್ವರ ಪ್ರೆಸ್ ಕ್ಲಬ್‍ನ ವಾರ್ಷಿಕ ಮಹಾಸಭೆ ಮಂಜೇಶ್ವರ ಪ್ರೆಸ್‍ಕ್ಲಬ್‍ನ ಅಧ್ಯಕ್ಷರಾದ ಅನೀಸ್ ಉಪ್ಪಳರವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಪ್ರೆಸ್‍ಕ್ಲಬ್‍ನಲ್ಲಿ ಜರಗಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಹರ್ಷಾದ್ ವರ್ಕಾಡಿ ಉಪಸ್ಥಿತರಿದ್ದರು. ಗತವರ್ಷದ ವರದಿ ವಾಚನ, ಲೆಕ್ಕಪತ್ರ ಮಂಡನೆಯನ್ನು ಮಂಜೇಶ್ವರ ಪ್ರೆಸ್‍ಕ್ಲಬ್‍ನ ಅಧ್ಯಕ್ಷರಾದ ಅನೀಸ್ ಉಪ್ಪಳ ಮಂಡಿಸಿದರು.
333
ಈ ವೇಳೆ 2016-17ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಅಧ್ಯಕ್ಷರಾಗಿ ರವಿ ಪ್ರತಾಪನಗರ, ಪ್ರಧಾನ ಕಾರ್ಯದರ್ಶಿಯಾಗಿ ರತನ್ ಕುಮಾರ್ ಹೊಸಂಗಡಿ, ಕೋಶಾಧಿಕಾರಿಯಾಗಿ ಜಗದೀಶ್ ಪ್ರತಾಪನಗರ, ಉಪಾಧ್ಯಕ್ಷೆಯಾಗಿ ಸಾಯಿಭದ್ರ ರೈ ಶಿರಿಯ, ಜತೆ ಕಾರ್ಯದರ್ಶಿಯಾಗಿ ನಿಶಾಕಿರಣ್ ಬಾಳೆಪುಣಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರೀಫ್ ಮಚ್ಚಂಪಾಡಿ, ಅಬ್ದುಲ್ ರೆಹಮಾನ್ ಉದ್ಯಾವರ, ಅನೀಸ್ ಉಪ್ಪಳ, ಹರ್ಷಾದ್ ವರ್ಕಾಡಿ ಆಯ್ಕೆಯಾದರು. ಮಂಜೇಶ್ವರ ಪ್ರೆಸ್‍ಕ್ಲಬ್‍ನ ಮಾಜಿ ಕೋಶಾಧಿಕಾರಿ ಸಲಾಂ ವರ್ಕಾಡಿ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ರತನ್ ಕುಮಾರ್ ಹೊಸಂಗಡಿ ವಂದಿಸಿದರು.

By suddi9

Leave a Reply

Your email address will not be published. Required fields are marked *