ಮೂಡುಬಿದಿರೆ: ಸ್ವಸಹಾಯ ಸಂಘದ ಹಣ ಕಟ್ಟಲು ಬೋರುಗುಡ್ಡೆಗೆಂದು ತೆರಳಿದ್ದ ಪಣಪಿಲದ ಗೇರು ಬೀಜ ಕಾರ್ಖಾನೆಯ ಕಾರ್ಮಿಕೆ ಅನಿತಾ(23)ಮನೆಗೆ ವಾಪಾಸಾಗದೆ ನಾಪತ್ತೆಯಾದ ಬಗ್ಗೆ ವರದಿಯಾಗಿದೆ.
ನಾಪತ್ತೆಯಾದ ಯುವತಿ ಪಣಪಿಲ ನಂದೊಟ್ಟು ದೇಜು ಅವರ ಪುತ್ರಿ ಎಂದು ತಿಳಿದುಬಂದಿದೆ. ಗೇರು ಬೀಜ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದ ಅನಿತಾ ಆಗಸ್ಟ್ 25ರಂದು ಬೆಳಿಗ್ಗೆ ಸ್ವಸಹಾಯ ಗುಂಪಿನ ಹಣ ಕಟ್ಟಲು ಬೋರುಗುಡ್ಡೆಗೆ ಹೋಗಿ ಬರುತ್ತೇನೆಂದು ಮನೆಯವರಲ್ಲಿ ಹೇಳಿ ಹೋದವಳು ಕಾಣೆಯಾಗಿದ್ದಾಳೆ. ಎಣ್ಣೆಕಪ್ಪು ಮೈಬಣ್ಣ, ಗುಂಡುಮುಖ ಹೊಂದಿರುವ ಈಕೆ ಮನೆಯಿಂದ ಹೊರಡುವಾಗ ಹಳದಿ ಬಣ್ಣದ ಚೂಡಿದಾರ ಧರಿಸಿದ್ದಳೆನ್ನಲಾಗಿದೆ. ಯುವತಿಯ ತಂದೆ ದೇಜು ಮೂಡುಬಿದಿರೆ ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

mbd_aug30_16

By suddi9

Leave a Reply

Your email address will not be published. Required fields are marked *