ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆ ಬಿ.ಮೂಡಾ ಗ್ರಾಮದ ಪೊನ್ನೋಡಿ ಹಳೆ ಅಕ್ಕಿಗಿರಣಿಯಲ್ಲಿರುವ ಸಂಘದ ಮುಖ್ಯ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆಯಿತು. ಸಭೆಯಲ್ಲಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರವೀಂದ್ರ ಕಂಬಳಿ, ಉಪಾಧ್ಯಕ್ಷೆ ಹರ್ಷಿಣಿ, ನಿರ್ದೇಶಕರಾದ ಬಿ.ಟಿ.ನಾರಾಯಣ ಭಟ್, ಜ್ಞಾನೇಶ್ವರ ಪ್ರಭು, ಪಿ.ಸುಬ್ರಹ್ಮಣ್ಯ ರಾವ್, ರತ್ನಮ್ಮ, ಶಶಿಕಲಾ ಉಡುಪ, ರಾಮ ನಾಯ್ಕ, ಪದ್ಮನಾಭ ಕಿದೆಬೆಟ್ಟು, ಸುಂದರ ಭಂಡಾರಿ, ವೆಂಕಟೇಶ ನಾವುಡ, ಪ್ರಭಾಕರ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಧರ್ಮಪಾಲ ಭಂಡಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

