ಕೈಕಂಬ: ಗಂಜಿಮಠದಲ್ಲಿ 21ನೇ ವರ್ಷದ ಸಾರ್ವಜನಿಕ ಮೊಸರುಕುಡಿಕೆ ಕಾರ್ಯಕ್ರಮದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ರಾಜೇಶ್ ನಾೈಕ್ ಉಳಿಪಾಡಿಗುತ್ತು ಉದ್ಘಾಟಿಸಿದರು.
ಮೊಸರು ಕುಡಿಕೆಯಂಥಾ ಧಾರ್ಮಿಕ ಮನೋರಂಜನಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಕಾರ್ಯವನ್ನು ಮಾಡುವುದು ನಿಜಕ್ಕೂ ಶ್ಲಾಘನೀಯ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಕೃಷ್ಣ ಜೆ. ಪಾಲೆಮಾರ್ ಹೇಳಿದ್ದಾರೆ.
ಅವರು ಗುರುವಾರ ಗಂಜಿಮಠದಲ್ಲಿ 21ನೇ ವರ್ಷದ ಸಾರ್ವಜನಿಕ ಮೊಸರುಕುಡಿಕೆ ಕಾರ್ಯಕ್ರಮದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡುತ್ತಿದ್ದರು.

ನಂತರ ಮಾತಾಡಿದ ಅವರು ಈ ಹಿಂದೆ ಮೊಸರುಕುಡಿಕೆ ಕಾರ್ಯಕ್ರಮ ಅತ್ತಾವರದಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ ಇಂದು ಹೆಚ್ಚಿನ ಕಡೆಗಳಲ್ಲಿ ನಡೆಯುತ್ತಿದೆ. ಜನರಲ್ಲಿ ಧಾರ್ಮಿಕ ಚಿಂತನೆ ಮೂಡಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅದರಲ್ಲೂ ಗಂಜಿಮಠದಲ್ಲಿ ನಡೆಯುತ್ತಿರುವ ಮೊಸರುಕುಡಿಕೆ ಉತ್ಸವದಲ್ಲಿ ಸಾರ್ವಜನಿಕ ಸೇವೆ ಸಲ್ಲಿಸಿಸುತ್ತಿರುವುದು ಅಭಿನಂದನಾರ್ಹ ಎಂದು ಎಂದು ಸಮಿತಿಯ ವತಿಯಿಂದ ಅಂಬ್ಯುಲೆನ್ಸ್ ಒದಗಿಸಿರುವ ಕುರಿತಾಗಿ ಹೇಳಿದರು.
ಧಾರ್ಮಿಕ ಭಾಷಣಗೈದ ಶರತ್ ಶೆಟ್ಟಿ ವಾಮಂಜೂರು ಮಾತಾಡಿ, ಕೃಷ್ಣನ ಆದರ್ಶಗಳನ್ನು ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು. ಹಾಜಿ ನೌಷಾದ್ ಮಾತಾಡಿ ಸರ್ವಧರ್ಮದವರೂ ಜೊತೆಯಾಗಿ ಒಟ್ಟಾಗಿ ಕೆಲಸ ನಿರ್ವಹಿಸಿದರೆ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯ. ಅದಕ್ಕೆ ನಮ್ಮದೂ ಒಂದು ಪಾಲು ಇದೆ ಎಂದು ನುಡಿದರು. ಈ ವೇಳೆ ಮಾತಾಡಿದ ಕೃಷ್ಣ ಅಮೀನ್‍ಮಾತಾಡಿದರು.
ವೇದಿಕೆಯಲ್ಲಿ ಕೃಷ್ಣ ಅಮೀನ್, ದೀಪಕ್ ಕೋಟ್ಯಾನ್, ಸಿಸ್ಟರ್ ಐಡಾ ಜಾನೆಟ್, ಸುರೇಶ್ ಶೆಟ್ಡಿ ಅಳಿಕೆ, ಸಮಿತಿ ಅಧ್ಯಕ್ಷ ರವಿಪ್ರಕಾಶ್ ಉಪಾಧ್ಯಕ್ಷ ರಾಜೇಶ್ ಅಂಚನ್ ಮುಂತಾದವರು ಉಪಸ್ಥಿತರಿದ್ದರು.









