ಬಂಟ್ವಾಳ :ಪಿಲಾತಬೆಟ್ಟು ಗ್ರಾ.ಪಂ.ವ್ಯಾಪ್ತಿಯ ನಯನಾಡಿನಿಂದ ಬೆಂಚಿನಡ್ಕ ಸಂಪರ್ಕ ರಸ್ತೆಯು ಸಂಪೂರ್ಣ ಹದೆಗೆಟ್ಟು ಸಂಚಾರ ದುಸ್ತರವಾಗಿದ್ದು ರವಿವಾರ ವಿವಿಧ ಸಂಘಟನೆಗಳೊಂದಿಗೆ ಸಾರ್ವಜನಿಕರು ಶ್ರಮದಾನ ಮೂಲಕ ರಸ್ತೆ ದುರಸ್ತಿಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ.

ನಯನಾಡು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್ ಧರ್ಮಗುರು ಫಾ|ಫ್ರೆಡ್ರಿಕ್ ಮೊಂತೆರೊ ಅವರು ಶ್ರಮದಾನವನ್ನು ಉದ್ಘಾಟಿಸಿದರು.ರಸ್ತೆಯ ಹೊಂಡಗುಂಡಿಗೆ ಕಲ್ಲು ,ಜಲ್ಲಿಹುಡಿ ತುಂಬಿಸಿ ಸಮತಟ್ಟು ಗೊಳಿಸಲಾಯಿತು.ಪಿಲಾತಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಜಲ್ಲಿ ಹುಡಿ ನೀಡಿದ್ದರು.ನಯನಾಡು ಚರ್ಚ್‍ನ ಕ್ರೈಸ್ತ ಸಮಾಜದ ವಿವಿಧ ಸಂಘಟನೆಗಳು,ಶ್ರೀರಾಮ ಭಜನ ಮಂದಿರ,ಶ್ರೀರಾಮ ಯುವಕ ಸಂಘ,ಹಾಲು ಉತ್ಪಾದಕರ ಸಂಘ,ಅಂಗನವಾಡಿ ಕೇಂದ್ರದ ಪೋಷಕರು,ಸ್ತ್ರೀ ಶಕ್ತಿ ಸಂಘ,ಅಜೇಯ ಗ್ರಾಮ ವಿಕಾಸ,ಪ್ರಾಥಮಿಕ,ಪ್ರೌಢ ಶಾಲೆ,ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು,ಶ್ರೀ ಕ್ಷೇ.ಧ.ಗ್ರಾ.ಯೋಜನೆ ನಯನಾಡಿನ ಸದಸ್ಯರು,ಏಂಜಲ್ ಕ್ರಿಕೆಟರ್ಸ್ ಮತ್ತು ಸಾರ್ವಜನಿಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಶ್ರಮದಾನದ ಮೂಲಕ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೊಳಿಸುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದ್ದು ಜನಪ್ರತಿನಿ„ಗಳು,ಸಂಬಂ„ತ ಇಲಾಖಾ„ಕಾರಿಗಳು ಸ್ಪಂದನೆ ನೀಡಿ ರಸ್ತೆ ಅಭಿವೃದ್ಧಿಗೊಳಿಸಬೇಕೆಂದು ಶ್ರಮದಾನ ನಿರತರು ತಿಳಿಸಿದ್ದಾರೆ.
ತಾ.ಪಂ.ಸದಸ್ಯ ರಮೇಶ್ ಕುಡ್ಮೇರ್,ಸ್ಥಳೀಯ ಗ್ರಾ.ಪಂ.ಸದಸ್ಯರಾದ ಲಕ್ಷ್ಮಿ ನಾರಾಯಣ ಹೆಗ್ಡೆ,ರಾಜೇಶ್,ಸರೋಜ ಅವರು ಭೇಟಿ ನೀಡಿದ್ದರು.ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸೇವಾ ಪ್ರತಿನಿ„ ಅಮೃತಾ ಎಸ್. ಭಾಗವಹಿಸಿದ್ದರು.
