ಮಂಗಳೂರು: ಮಾಜಿ ಮುಖ್ಯಮಂತ್ರಿ ಡಾ|  ಎಂ ವೀರಪ್ಪ ಮೊಯಿಲಿಯವರು  ಹಿರಿಯಡಕಕ್ಕೆ ಭೇಟಿನೀಡಿ ಇತ್ತೀಚಿಗೆ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಕರಸೇವೆ ನಡೆಯುತ್ತಿದ್ದಾಗ ಛಾವಣಿಯ ಅಡ್ಡಗೋಡೆ ಕುಸಿದು ಬಿದ್ದು ನಡೆದ ಅವಘಡದಲ್ಲಿ ಮೃತಪಟ್ಟ ದಿ| ಅಂಗಾರ ಶೇರಿಗಾರ್‌ ಅವರ ಮಗ ಪ್ರಸಾದ್‌ ಸೇರಿಗಾರ್,  ಲೋಕೇಶ್‌  ಮತ್ತು ಇತರ ಗಾಯಾಳುಗಳ ಮನೆಗೆ ಬೇಟಿಮಾಡಿ ಮನೆಯವರಿಗೆ ಸಾಂತ್ವಾನವನ್ನು ಹೇಳಿದರಲ್ಲದೆ ಸರಕಾರದಿಂದ ಸಹಾಯಧನ ಸಿಗುವಂತೆ ಪ್ರಯತ್ನಿಸುವುದಾಗಿ ಅಶಾಶ್ವನೆಯಿತ್ತರು ಈ ಸಮಯದಲ್ಲಿ ಇವರೊಂದಿಗೆ ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿಯವರು ಉಪಸ್ಥಿತರಿದ್ದರು.3
2
ದೇವಸ್ಥಾನದಲ್ಲಿ ಶ್ರೀಯುತರನ್ನು ದೇವಸ್ಥಾನದ ಜೀರ್ಣೋದ್ದಾರದ ಸಮಿತಿಯವತಿಯಿಂದ ಕಾರ್ಯದರ್ಶಿ ಶ್ರೀ ಅಮರನಾಥ ಶೆಟ್ಟಿ, ಅಧ್ಯಕ್ಷ ಶ್ರೀ ಗೋವರ್ಧನ ದಾಸ್ ಹೆಗ್ಡೆ, ಆಡಳಿತಾಧಿಕಾರಿ ಕೃಷ್ಣಮೂರ್ತಿ, ನಟರಾಜ ಹೆಗ್ಡೆ, ಹಿರಿಯಡ್ಕ ದೇವಾಡಿಗ ಉಪಸಂಘದ ಅಧ್ಯಕ್ಷ ನಾರಾಯಣ ಸೇರಿಗಾರ, ಸದಸ್ಯರುಗಳಾದ ರಾಘವೇಂದ್ರ ಜಿ, ಹೆಚ್ ಗಣೇಶ್, ರತ್ನಾಕರ ಸೇರಿಗಾರ್ ಇವರುಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *