ವೀರಕಂಭ:ಸಂಘ ಸಂಸ್ಥೆಗಳ ಸಹಾಯದಿಂದ ಶಿಕ್ಷಣಕ್ಕೆ ಪೂರಕವಾದ ಕೆಲಸಗಳು ನಡೆದಾಗ ಅವುಗಳು ಸಮಾಜಕ್ಕೆ ಹೆಚ್ಚು ಹತ್ತಿರವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಅಡಗಿರುರುವ ಕಲೆಯನ್ನು ಜಾಗೃತಗೊಳಿಸಿ ತಮ್ಮಲ್ಲೂ ಸಾಮಥ್ರ್ಯವಿದೆ ಎಂದು ಗುರುತಿಸಲು ಚಿತ್ರ ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಅರ್ಥಪೂರ್ಣ ವಾಗಿದೆ. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ನ ಬಂಟ್ವಾಳ ವಲಯದ ಸಮಾಜ ಮುಖಿ ಕೆಲಸಗಳು, ಶಿಸ್ತು, ಸಹಕಾರ, ಸಂಘಟನಾ ಕೆಲಸಗಳು ಮಾದರಿಯಾಗಿದ್ದು ಇತರರಿಗೆ ಮಾರ್ಗ ದರ್ಶನವಾಗಿದೆ ಎಂದು ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಇವರು 178 ನೇ ವಿಶ್ವ ಛಾಯಾ ಗ್ರಾಹಕರ ದಿನಾಚರಣೆಯ ಅಂಗವಾಗಿ ದ.ಕ.ಜಿ.ಪಂ. ಸ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ಎಸ್.ಕೆ.ಪಿ.ಎ ಬಂಟ್ವಾಳ ವಲಯದ ವತಿಯಿಂದ ಕ್ಲಸ್ಟರ್ ಮಟ್ಟದ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ನಡೆಸಿದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

RDS_0644 01
ಕೇಂದ್ರ ಸಮಿತಿಯ ಖಜಾಂಚಿ ಹಾಗೂ ಎಸ್.ಕೆ.ಪಿ.ಎ ಬಂಟ್ವಾಳ ವಲಯದ ದಯಾನಂದ ಬಂಟ್ವಾಳರವರು ಇದೊಂದು ವೃತ್ತಿಪರ ಸಂಘಟನೆ ತಾಲೂಕುವಾರು ಜಿಲ್ಲಾವಾರುಗಳಾಗಿ ಛಾಯಾಗಹ್ರಾಹಕ ಸಂಘಗಳು ತಮ್ಮ ವೃತ್ತಿಪರತೆಯ ಜೊತೆಗೆ ಆರೋಗ್ಯ ತಪಾಸಣೆ ಪುಸ್ತಕ ವಿತರಣೆ, ವ್ಯಕ್ತಿತ್ವ ವಿಕಸನ ಶಿಬಿರ ಮುಂತಾದ ಹತ್ತು ಹಲವು ರೀತಿಯ ಸಮಾಜ ಸೇವೆಯಲ್ಲಿ ತೊಡಗಿಕೊಂಡು ತಮ್ಮ ವೃತ್ತಿಯ ಜೊತೆಗೆ ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ ಕೆಲಸದಲ್ಲಿ ತೊಡಗಿರುವುದು ಹೆಮ್ಮೆಯ ವಿಚಾರ ಎಂಬುದಾಗಿ ತಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪ್ರಾ.ಶಾ.ಶಿ ಸಂಘದ ಪದಾಧಿಕಾರಿಯಾಗಿರುವ ಫ್ರಾನ್ಸಿಸ್ ಡೇಸಾರವರು ಒಂಭತ್ತು ಸೆಕೆಂಡಿನಲ್ಲಿ ಚಿತ್ರ ರಚಿಸಿ ಅಚ್ಚರಿ ಮೂಡಿಸಿದರು. ಎನ್.ಪಿ.ಎಸ್ ಸಂಘದ ಅಧ್ಯಕ್ಷರು ಪ್ರಾ.ಶಾ.ಶಿ ಪದಾಧಿಕಾರಿ ಸಂತೋಷ್ ಬಾಳ್ತಿಲರವರು ನೂರು ಪದಗಳಲ್ಲಿ ಹೇಳಬಹುದಾದ ವಿಚಾರವನ್ನು ಒಂದು ಚಿತ್ರ ದಲ್ಲಿ ಬಿಂಬಿಸಲು ಸಾಧ್ಯವಿದೆ. ಅದಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ವಿಚಾರವೆಂದು ತಿಳಿಸಿ ಶುಭ ಹಾರೈಸಿದರು. ವೈಜ್ಞಾನಿಕ ಕ್ರಾಂತಿಯಿಂದ ಛಾಯಾಚಿತ್ರಗಾರಿಕೆಯಲ್ಲಿ ಅದೆಷ್ಟೋ ಪೈಪೋಟಿಗಳಿದ್ದರೂ ಉತ್ತಮ ವಾದ ಭಾಂಧವ್ಯತೆಯು ಇಂದು ಸಮಾಜದಲ್ಲಿ ಛಾಯಗ್ರಾಹಕರಿಗೆ ಹೆಚ್ಚಿನ ಅವಕಾಶವನ್ನು ನೀಡಿದೆ. ವೈಜ್ಞಾನಿಕ ಚಿಂತನೆಯು ಅವಶ್ಯಕತೆಗೆ ಅನುಸಾರವಾಗಿ ನಮ್ಮಲ್ಲಿ ಬದಲಾವಣೆಯನ್ನು ತರುತ್ತದೆ. ಅದಕ್ಕಾಗಿ ಕೇವಲ ತಮ್ಮ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಮಾಜದಲ್ಲೂ ಗುರುತಿಸಿ ಕೊಳ್ಳುವಲ್ಲಿ ಸಾಧ್ಯತೆಗಳಿವೆಯೆಂದು ಎಸ್.ಕೆ.ಪಿ.ಎ ಬಂಟ್ವಾಳ ವಲಯದ ಅಧ್ಯಕ್ಷರಾದ ಶ್ರೀ ಸುಕುಮಾರ್ ಬಂಟ್ವಾಳ ರವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು.
ಕಲ್ಲಡ್ಕ ಮತ್ತು ಬಾಳ್ತಿಲ ಕ್ಲಸ್ಟರ್‍ನ ಸಮೂಹ ಸಂಪನ್ಮೂಲ ವ್ಯಕ್ತಿ ಆರತಿಯವರು ಇಂದು ಆಂಗ್ಲ ಮಾಧ್ಯಮಗಳ ವ್ಯಾಮೋಹದಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗುತ್ತಾರೆ. ಈ ನಿಟ್ಟಿನಲ್ಲಿ ಎಸ್.ಕೆ.ಪಿ.ಎ ಬಂಟ್ವಾಳ ವಲಯವು ಶೈಕ್ಷಣಿಕ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಂಜೀವ ಮೂಲ್ಯ, ಎಸ್.ಕೆ.ಪಿ.ಎ ಬಂಟ್ವಾಳದ ವಲಯ ಪ್ರತಿನಿಧಿ ವರುಣ್ ಕಲ್ಲಡ್ಕ, ಮಚ್ಚೇಂದ್ರನಾಥ ಆಚಾರ್ಯ ಮಚ್ಚಾ ಆಟ್ರ್ಸ ಕಲ್ಲಡ್ಕ, ಸಂಘಟನಾ ಕಾರ್ಯದರ್ಶಿ ಚಿನ್ನಾ ಕಲ್ಲಡ್ಕ, ಎಸ್.ಕೆ.ಪಿ.ಎಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಚಿತ್ರ ಸ್ಪರ್ಧೆಗೆ 1 ರಿಂದ 4ನೇ ತರಗತಿ ಕಿರಿಯ ವಿಭಾಗಕ್ಕೆ ಹಾಗೂ 5 ರಿಂದ 7 ನೇತರಗತಿಯ ಹಿರಿಯ ವಿಭಾಗಕ್ಕೆ ಸ್ವಚ್ಛ ಭಾರತ್ ವಿಷಯವನ್ನು ನೀಡಲಾಗಿತ್ತು. ಕಲ್ಲಡ್ಕ ಹಾಗೂ ಬಾಳ್ತಿಲ ಕ್ಲಸ್ಟರ್‍ನಸರಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಎಸ್.ಕೆ.ಪಿ.ಎ ಬಂಟ್ವಾಳ ವಲಯದ ಕಾರ್ಯದರ್ಶಿ ಹರೀಶ್ ಕುಂದರ್ ಸ್ವಾಗತಿಸಿ ಶಿಕ್ಷಕಿ ಶಕುಂತಲಾ ವಂದಿಸಿದರು. ಶಿಕ್ಷಕಿ ಸಂಗೀತಾಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸಿಸಿಲಿಯಾ ಸಹಕರಿಸಿದರು.

By suddi9

Leave a Reply

Your email address will not be published. Required fields are marked *