ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ವಿಟ್ಲ ವಲಯ ಇದರ ಆಶ್ರಯದಲ್ಲಿ ವಿಟ್ಲ ಚಂದ್ರನಾಥ ಬಸದಿ ವಠಾರದಲ್ಲಿ `ನಾಗರಿಕಾ ಪ್ರಜ್ಞಾ’ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಜನಾರ್ಧನ, ಬಸದಿಯ ವಿನೋದ್ ಕುಮಾರ್, ಜಿನಚಂದ್ರ ಕೇಪು, ಅರ್ಚಕ ಧನಪಾಲ ಇಂದ್ರ, ಶ್ರೀಮಂದರ ಜೈನ್, ಸೇವಾಪ್ರತಿನಿಧಿಗಳಾದ ನಿತ್ಯಾನಂದ, ಹೇಮಲತಾ, ಜನಾರ್ಧನ , ರೇವತಿ, ಒಕ್ಕೂಟದ ಅಧ್ಯಕ್ಷ ಉದಯಕುಮಾರ್, ಚಂದ್ರಶೇಖರ್ ಆಚಾರ್ಯ, ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ತನಿಯಪ್ಪ ಮೂಲ್ಯ ಹಾಗೂ ಯೋಜನೆಯ ಸದಸ್ಯರು ಭಾಗವಹಿಸಿದ್ದರು.

