ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಗಳ ಪ್ರಯತ್ನದಿಂದ ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಬಿ.ಸಿ.ರೋಡ್ವರೆಗಿನ ರಸ್ತೆಗೆ ಸ್ವಾಮೀ ವಿವೇಕಾನಂದರ ಹೆಸರನ್ನು ಇಡಲು ಇಲಾಖೆ ಮುಂದಾಗಿದೆ.
ಕೈಕಂಬದ ಪೊಳಲಿ ದ್ವಾರದ ಸಮೀಪದಲ್ಲಿ ಮೂರು ಕಡೆಗೆ ಕೂಡುವ ರಸ್ತೆ ಸಂಧಿಸವವಲ್ಲಿ ಸರ್ಕಲ್ ಒಂದನ್ನು ನಿರ್ಮಿಸಲಾಗಿದ್ದು ಅದರಲ್ಲಿ ವಿವೇಕಾನಂದ ಸರ್ಕಲ್ ನಿರ್ಮಿಸಲು ಸ್ವಾಮೀಜಿ ಮನಸ್ಸು ಮಾಡಿದ್ದಾರೆ. ಅಲ್ಲದೆ ಸ್ವಾಮೀಜಿ ಇಲ್ಲಿಂದ ಹೋಗಿಬರುವ ಜನರಿಗೆ ಅನುಕೂಲವಾಗಲೆಂದು ಬಸ್ ನಿಲ್ದಾಣವೊಂದನ್ನು ನಿರ್ಮಿಸಲು ಸ್ವಾಮೀಜಿ ಮುಂದಾಗಿದ್ದು ಅದರ ಕಾಮಗಾರಿಯೂ ನಡೆಯುತ್ತಿದೆ. ಇದರಂತೆ ಇಲ್ಲಿ ಕಾಮಗಾರಿ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ರಸ್ತೆಗೆ ವಿವೇಕಾನಂದರ ಹೆಸರನ್ನು ಇಡಲು ಹಲವಾರು ತಿಂಗಳಿಂದ ಭಗೀರತ ಯತ್ನ ನಡೆಸುತ್ತಿದ್ದ ಪೊಳಲಿ ರಾಮಕೃಷ್ಣ ತಪೋವನದ ವಿವೇಕಾ ಚೈತನ್ಯಾನಂದ ಸ್ವಾಮೀಜಿಯವರು ಕೊನೆಗೂ ಅಧಿಕಾರಿಗಳ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ವಿವೇಕಾನಂದ ಸರ್ಕಲ್ಗೆ ಈಗಾಗಲೇ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ನಡೆದ ತಕ್ಷಣ ಅದರ ಲೋಕಾರ್ಪಣೆ ನಡೆಲಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ವಿವೇಕಾನಂದರ ಚಿಂತನೆಯನ್ನು ಲೋಕವ್ಯಾಪ್ತಿಗೊಳಿಸಿ ಜನತೆಯನ್ನು ಸಾತ್ವಿಕತೆಯತ್ತ ಹೊರಳಿಸಲು ಮನಸ್ಸು ಮಾಡುತ್ತಿರುವ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಮಕ್ಕಳಿಗೆ ದೇವರ ಚಿಂತನೆಗಳನ್ನು ಹೆಚ್ಚಿಸುವ ಸಲುವಾಗಿ ಆಶ್ರಮದಲ್ಲಿ ಭಜನೆ, ಪ್ರಾಣಾಯಾಮ, ಯೋಗ, ಸತ್ಸಂಗ, ಮನೆಮನೆಭಜನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸಮಾಜವನ್ನು ಜಾಗೃತಿಯತ್ತ ಮುಂದುವರಿಸಲು ಪೊಳಲಿ ಹಲವಾರು ಭಾಗವನ್ನು ದತ್ತು ಪಡೆದುಕೊಂಡು ವಿವೇಕಚಿಂತನೆಯನ್ನು ಜಾಗೃತಿಗೊಳಿಸುತ್ತಿದ್ದಾರೆ. ರಕ್ತದಾನ ಶಿಬಿರ, ಉಚಿತ ಕಂಪ್ಯೂಟರ್ ಶಿಕ್ಷಣ, ರಕ್ತದೊತ್ತಡ ನಿವಾರಿಸಲು ಚಿಕಿತ್ಸೆ ಮುಂತಾದ . ಇವರ ಆಶ್ರ,ಮದಲ್ಲಿ ಮೂರುವರ್ಷದಿಂದೀಚೆಗೆ 48 ಮಕ್ಕಳಿದ್ದು ವಿವಿಧ ಶಾಲೆಗಳಿಗೆ ಮಕ್ಕಳು ಇಲ್ಲಿಂದಲೇ ಹೋಗುತ್ತಿದ್ದಾರೆ. ಮಕ್ಕಳನ್ನು ಸಲಹುವ ಸಲುವಾಗಿ ಇಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯ ನಿರ್ಮಿಸಲಾಗಿದ್ದು ಇದರಿಂದ ಹಲವಾರು ಮಕ್ಕಳು ಲಾಭಪಡೆಯುತ್ತಿದ್ದಾರೆ.



