ಮೂಡುಬಿದಿರೆ: ಮಂಗಳೂರು ಎನ್.ಸಿ.ಸಿ. ಗ್ರೂಪ್ನ ಕಮಾಂಡರ್ ಆಗಿ ಮೂರು ವರ್ಷ ಸೇವೆ ಸಲ್ಲಿಸಿರುವ ಕರ್ನಲ್ ಶ್ರೀರಾಮ್ ಅವರನ್ನು ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುರಿಯನ್, ಕರ್ನಲ್ ಎಂ.ಆರ್ ಚೌಧರಿ, ಕರ್ನಲ್ ರೆಗಿ ಫಿಲಿಪೋಸ್, ಕರ್ನಲ್ ಚಾಕೊ, ವಿಂಗ್ ಕಮಾಂಡರ್ ಸುಜಿತ್ ಕುಮಾರ್, ಕ್ಯಾಪ್ಟನ್ ರಾಧಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. 
ಆಳ್ವಾಸ್ ಕಾಲೇಜಿನ ಎನ್ಸಿಸಿ ಅಧಿಕಾರಿ ಡಾ.ರಾಜೇಶ್ ಸಂಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್ಸಿಸಿ ಮುಖ್ಯಾಧಿಕಾರಿಗಳಾದ ಜೆರಾಲ್ಡ್, ಗಜಾನನ ಮರಾಠೆ, ಅಧಿಕಾರಿಗಳಾದ ಸುಧಾ, ಶಾಕಿನ್, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಸಂಪತ್, ಕೀರ್ತನ್ ಹಾಗೂ ಎನ್ಸಿಸಿ ಕೆಡೆಟ್ಗಳು ಭಾಗವಹಿಸಿದರು.
