ಮೂಡುಬಿದಿರೆ: ಮಿತ್ತಬೈಲು ಸತ್ಯಸಾರಮಾಣಿ ದೈವಸ್ಥಾನದ ರಸ್ತೆಯನ್ನು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟು ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ದೀನ ದಲಿತರ ಏಳಿಗೆಗಾಗಿ ರಾಜ್ಯ ಸರ್ಕಾರ ದುಡಿಯುತ್ತಿದೆ.
ಮುಂದೆ ಕೊರಗರ ಕಾಲನಿಯವರೆಗೆ ಕಾಂಕ್ರೀಟು ರಸ್ತೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು. ಮಂಗಳೂರು ಎಪಿಎಂಸಿ ಮಾಜಿ ಸದಸ್ಯ ವಾಸುದೇವ ಪಿ.ನಾಯಕ್, ಪೌಲ್ ಡಿ’ಸೋಜ, ದೈವಸ್ಥಾನದ ಅಧ್ಯಕ್ಷ ಶೀನ, ಪ್ರಸಾದ್ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಅಂಡ್ರ್ಯೂ ಡಿ’ಸೋಜ ಪ್ರಸ್ತಾವನೆಗೈದರು.
