ವಿಟ್ಲ:  ಶ್ರೀ  ಕ್ಷೇ ಧ ಗ್ರಾ ಯೋ ವಿಟ್ಲ ವಲಯ ಬಿ ಒಕ್ಕೂಟದ ಸಂಯೋಜನೆಯಲ್ಲಿ ಜ್ಞಾನಗಂಗಾ ಸ್ವ-ಸಹಾಯ ಸಂಘ ಮೇಗಿನಪೇಟೆ ಇದರ ಪ್ರಾಯೋಜಕತ್ವದಲ್ಲಿ ಮೇಗಿನಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರಗಿತು.

dms, ಬಳಿಕ ಶಾಲಾ ಕೈತೋಟ ರಚನೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷ ನೆಗಳಗುಳಿ ಸುಂದರ ಆಚಾರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಲಯ ಮೇಲ್ವಿಚಾರಕ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ನಿತ್ಯಾನಂದ ಸ್ವಾಗತಿಸಿ ಪ್ರಸ್ತಾವಿಸಿದರು. ಒಕ್ಕೂಟದ ಕಾರ್ಯದರ್ಶಿ ನಾರಾಯಣ ಗೌಡ, ಉಪಾಧ್ಯಕ್ಷೆ ಪ್ರೇಮಾ ಆರ್ ಹೆಗ್ಡೆ, ಜೊತೆಕಾರ್ಯದರ್ಶಿ ಗಣೇಶ್, ಕೋಶಾಧಿಕಾರಿ ವಿಮಲ, ಸೇವಾ ಪ್ರತಿನಿಧಿ ಸರಿತಾ, ಎ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಆಚಾರ್ಯ ಹಾಗೂ ಸದಸ್ಯರು, ಶಾಲಾ ಸಹಶಿಕ್ಷಕು ಮತ್ತು ಮಕ್ಕಳು ಭಾಗವಹಿಸಿದ್ದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಜಯಂತಿ ವಂದಿಸಿದರು.

By suddi9

Leave a Reply

Your email address will not be published. Required fields are marked *