ಕೈಕಂಬ: ಯುವಕರು ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯದ ಕಡೆಗೆ ಒಲವು ವ್ಯಕ್ತಪಡಿಸಿರುವುದು ವಿಷಾದನೀಯ ಎಂದು ಕೆನರಾ ಕಮ್ಯುನಿಕೇಷನ್ ಡೈರಕ್ಟರ್ ಫಾ| ರಿಚ್ಚರ್ಡ್ ಡಿ’ಸೋಜಾ ಅವರು ಹೇಳಿದರು.
ಅವರು ಗುರುಪುರ ಕೈಕಂಬದ ಪೊಂಪೈ ಸಭಾಭವನದಲ್ಲಿ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಎಲೆಕ್ಟ್ರಾನಿಕ್ ಸಾದನಗಳ ಬಳಕೆ ಮಿತಿ ಮೀರಬಾರದಂತೆ ಜಾಗೃತವಹಿಸಲು ತಿಳಿಸಿದರು . ಕಾರ್ಯಕ್ರಮದಲ್ಲಿ ಸುಮಾರು 75 ಯುವಕ ಯುವತಿಯರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಪೊಂಪೈ ಚರ್ಚಿನ ಧರ್ಮಗುರುಗಳು ಫಾ|ಆಂಟನಿ ಲೋಬೋ, ಲವಿಶಾ ಡಿ’ಸೋಜಾ, ಅಮಿತಾ ಲೋಬೋ ಮತ್ತು ಗೋಡ್ವಿನ್ ತಾವ್ರೋ ಉಪಸ್ಥಿತರಿದ್ದರು.


