ಊರಿಗೆ ಬಂದ ಪಾರ್ಥಿವ ಶರೀರ; ಮುಗಿಲು ಮುಟ್ಟಿದ ಆಕ್ರಂದನ
ಸುದ್ದಿ 9 ಕೈಕಂಬ:
ಈಚರ್ ಬಡಿದು ದುರಂತ ಮರಣವನ್ನಪ್ಪಿದ ಗುರುಪುರದ ರಾಜೇಂದ್ರ ಪೂಜಾರಿ ಹಾಗೂ ಜ್ಯೋತಿ ದಂಪತಿಯ ಪುತ್ರ ರೋಹಿತ್(7) ಮೃತದೇಹ ಊರಿಗೆ ಶುಕ್ರವಾರ ಮಧ್ಯಾಹ್ನದ ವೇಳೆಗೆ ಕರೆತಂದಿದ್ದು ಮನೆ ಸಮೀಪ ಅಂತ್ಯಸಂಸ್ಕಾರ ನಡೆಸಲಾಯ್ತು. ಈ ವೇಳೆ ಊರಿನ ಹಲವಾರು ಮಂದಿ ಪಾಲ್ಗೊಂಡಿದ್ದು ಎಲ್ಲರ ದುಃಖದ ಕಟ್ಟೆಯೊಡೆದಿತ್ತು. ಬಾಲಕ ಸಾವಿನಿಂದ ಗುರುಪುರದಲ್ಲಿ ಸೂತಕದ ಛಾಯೆ ಆವರಿಸಿತ್ತು. ಬಾಲಕನ ತಂದೆ ರಾಜೇಂದ್ರ ಪೂಜಾರಿ ದ. ಆಫ್ರಿಕಾದ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದು ಬಾಲಕನ ಸಾವಿನ ಸುದ್ದಿ ಕೇಳಿ ಶುಕ್ರವಾರ ಬೆಳಿಗ್ಗೆ ಊರಿಗೆ ಬಂದಿದ್ದರು. ಮಗನ ಸಾವಿನಿಂದ ಅವರು ಗರಬಡಿದವರಂತಾಗಿದ್ದಾರೆ. ಅಲ್ಲದೆ ಬಾಲಕನ ತಾಯಿ ಜ್ಯೋತಿ ಹಾಗೂ ಬಾಲಕನ ಅಣ್ಣ ಐದನೇ ತರಗತಿಯಲ್ಲಿರುವ ಧನುಷ್ ಏನೂ ಹೇಳದಂಥ ಸ್ಥಿತಿಯಲ್ಲೇ ಇದ್ದಾರೆ. ಅಂತ್ಯ ಸಂಸ್ಕಾರದ ವೇಳೆ ಪಾಂಪೆ ಶಾಲೆಯ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು, ಅನೇಕ ಮಂದಿ ಗಣ್ಯರು ಸೇರಿದ್ದರು. ಬಾಲಕ ನ ಸಾವಿನ ಸುದ್ದಿ ತಿಳಿದ ಗುರುಪುರದ ನಾಗರಿಕರು ರಸ್ತೆ ತಡೆ ಮಾಡಿ ಉಗ್ರ ಪ್ರತಿಭಟನೆ ಮಾಡಿದ ಪರಿಣಾಮ ಗುರುಪುರ ವಜ್ರದೇಹಿ ಮಠದ ಸ್ವಾಮಿಜಿ ಸ್ಥಳಕ್ಕೆ ಬಂದು ಪ್ರತಭಟನೆಯಲ್ಲಿ ನಿರತರಾದವರಿಗೆ ಸಮದಾನ ಪಡಿಸಿ ತಹಶೀಲ್ದಾರ್ ಹತ್ತಿರ ಕೂಡಲೇ ಇದಕ್ಕೆ ಸ್ಫಂದಿಸಬೇಕೆಂದಾಗ ತಹಶೀಲ್ದಾರ್
ಹಂಪ್ಸ್ ನಿರ್ಮಾಣ
ಶುಕ್ರವಾರ ಸಂಜೆಯ ಒಳಗೆ ಹಂಪ್ಸ್ ನಿರ್ಮಾಣ ಮಾಡಲಾಗುವುದು ಹಾಗೂ ವಾಹನಗಳ ಮೇಲೆ ನಿಗಾ ಇಡಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಕೊಟ್ಟ ಮಾತಿನಂತೆ ಶುಕ್ರವಾರ ಹಂಪ್ಸ್ ನಿರ್ಮಾಣ ಕಾರ್ಯಾ ಆಗಿದೆ ಒಟ್ಟು ಇಲ್ಲಿ ಏಳು ಹಂಪ್ಸ್ ನಿರ್ಮಾ ಣವಾಗುತ್ತಿದೆ. ಅದರಲ್ಲಿ ರೋಸಾಮಿಸ್ತಿಕಾ ಶಾಲೆಯ ಹತ್ತಿರದ ಯು ಟರ್ನ್ ಸ್ಥಳದಲ್ಲಿ ಎರಡು ಕಡೆ ಐದು ಐದು ಲೈನ್ಸ್ ಅಲ್ಲದೆ ಗುರುಪುರ ವ್ಪೊಯವಾಶಾಯ ಸಹಕಾರಿ ಬ್ಲೀಯಾಂಕಿನ ಎದುರುಗಡೆ ಐದು ಲೈನ್ ಸೆಂಟ್ರಲ್ ಕ್ಲೋತ್ ಸ್ಟೋರ್ ಗುರುಪುರ ಐದು ಲೈನ್ ವೆಂಕಟರಮಣ ದೇವಸ್ಥಾನದಎದುರುಗಡೆ ಐದು ಲೈನ್ ಹಂಪ್ಸ್ ಅಲಯಿಗುಡ್ಡೆ ಸರಾಕಾರಿ ಕಾಲೇಜು ಎದುರು ಎರಡುಕಡೆ ಒಂದೊಂದು ಲೈನ್ ಗುರುಪುರ ದಲ್ಲಿ 7 ಹಂಪ್ಸ್ ನಲ್ಲಿ 27ಲೈನ್ ಮಾರ್ಗದ ಮದ್ಯೆ ಹಂಪ್ಸ್ ಹಾಕಲಾಗಿದೆ. ಅಲ್ಲದೆ ಪೋಲಿಸ್ ಕಾನ್ ಸ್ಟೇಬಲ್ ರನ್ನು ಸಹ ನಿಯೋಜಿಸಲಾಗಿದೆ. ಅಲ್ಲದೆ ವಾಹನಗಳು ತನ್ನ ವೇಗವನ್ನು ತಗ್ಗಿಸುವ ಸಲುವಾಗಿ ಬ್ಯಾರಿಕೇಡ್ ಕೂಡಾ ಅಳವಡಿಸಲಾಗಿದೆ. ಕೆಲವೊಂದು ವಾಹನ ಸವಾರರು ಇಲ್ಲಿನ ಹಂಪ್ಸ್ ಕ್ರಮಪ್ರದವಾಗಿಲ್ಲ ಎಂದು ವೆಹಿಕಲ್ ನವರು ಹಿಡಿಶಾಪ ಹಾಕುತ್ತಿದ್ದಾರೆ.
ರಸ್ತೆ ನಿರ್ಮಾ ಣ ಮಾಡಿದರೆ ಫಲಪ್ರದವಾಗದು: ಗುರುಪುರ ವಜ್ರದೇಹಿ ಸ್ವಾಮೀಜಿ
ಪ್ರಸ್ತುತ ಇದು ರಾಷ್ಟ್ರೀಯ ಹೆದ್ದಾರಿಯಾದುದರಿಂದ ಇಲ್ಲಿ ಕೇವಲ ಹಂಪ್ಸ್ ನಿಮರ್ಾಣ ಮಾತ್ರ ಮಾಡಿದರೆ ಫಲಪ್ರದವಾಗದು, ಇಲ್ಲಿನ ಮೂಲಭೂತ ಅಗತ್ಯವಾದ ಹೆದ್ದಾರಿ ಅಗಲೀಕರಣ ಮಾಡಬೇಕು. ಸರಹದ್ದುಗಳಲ್ಲಿರುವ ಬೇರೆ ಬೇರೆ ಅಡೆತಡೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ತಕ್ಷಣ ನಿವಾರಣೆ ಮಾಡಿ ಹೆದ್ದಾರಿ ಅಗಲೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು. ಈಗಾಗಲೇ ನಮಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ತಾಲೂಕು ದಂಡನಾಧಿಕಾರಿಗಳು ಕೊಟ್ಟ ಭರವಸೆಯಂತೆ ಸುಮಾರು ಜೂನ್ ತಿಂಗಳ ಕೊನೆಯ ವಾರದಲ್ಲಿ ಡಿ.ನೋಟಿಪಿಷಿಕೇಶನ್ ಪ್ರತಿಕ್ರಿಯೆಯ ಬೆಳವಣಿಗೆಗಳ ಬಗೆಗೆ ನಾವು ಕಾರ್ಯಪ್ರವೃತತ್ತರಾಗುತ್ತೇವೆ. ಅಲ್ಲದೆ ತಕ್ಷಣವಾಗಿ ಉಬ್ಬುಗಳನ್ನು ನಿರ್ಮಾಣ ಮಾಡಿ ಒಬ್ಬರು ಪೋಲಿಸ್ ಕಾನ್ಸ್ಟೇಬಲ್ರನ್ನು ನೇಮಕ ಮಾಡಿ ಡಿವೈಡರ್ ( ಸ್ಪೀಡ್ತಡೆ) ಗಳನ್ನು ಹಾಕುವುದರ ಮೂಲಕ ಸರಾಗವಾಹನ ಸಂಚಾರ ಮತ್ತು ಜನನಿಬಿಡ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದಿದ್ದಾರೆ. ಅಲ್ಲದೆ ಅಲ್ಲಲ್ಲಿ ರಸ್ತೆಗಳ ಕೊರೆತವಿದೆ ಅದನ್ನು ಗಮನಿಸಿ ಹೆಚ್ಚಿನ ಕಾರ್ಯಗಳನ್ನು ಪೂರೈಸುತ್ತೇವೆ, ಮಳೆಗಾಲ ಕಳೆದ ತಕ್ಷಣ ಮುಂದಿನ ಎಲ್ಲಾ ಕಾರ್ಯಗಳಲ್ಲಿ ಪ್ರವೃತ್ತರಾಗುತ್ತೇವೆ ಎಂದಿದ್ದಾರೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

ಮೇಲ್ಸೇತುವೆಯ ಅಗತ್ಯತೆ:
ಪ್ರಸ್ತುತ ಗುರುಪುರದಲ್ಲಿ ವನ್ ವೇ ರಸ್ತೆ ಇದ್ದರೂ ಸಿಂಗಲ್ ಫಥ್ ಮೂಲಕ ವಾಹನ ಸಂಚರಿಸುವುದೇ ದುಸ್ತರವಾಗಿದೆ. ಘನವಾಹನಗಳ ಚಾಲಕರು ಇಲ್ಲಿ ವಾಹನ ಸಂಚಾರ ನಡೆಸಲು ಹೆದರುತ್ತಾರೆ. ಲಾರಿ ಚಾಲಕರಾದ ಮೋಹನ್ ಮತ್ತು ವಿಸ್ವನಾಥ ಎಂಬವರ ಅಭಿಪ್ರಾಯದಂತೆ ಗುರುಪುರದಲ್ಲಿ ಫುಟ್ಪಾತ್ ಇಲ್ಲದೇ ಇರುವುದರಿಂದ ನಮ್ಮಂತಹಾ ಘನವಾಹನಗಳನ್ನು ಮುನ್ನಡೆಸಲು ಕಷ್ಟವಾಗುತ್ತದೆ. ಗುರುಪುರದ ಎದುರಿನ ಭಾಗ ಕಡಿದಾಗಿರುವುದರಿಂದ ಹಾಗೂ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಬರುವುದರಿಂದ ಎಲ್ಲಾ ಕಡೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಪಾದಾಚಾರಿಗಳು ಹಾಗೂ ಇಲ್ಲೇ ಪಕ್ಕದಲ್ಲೇ ಶಾಲೆಯಿರುವುದರಿಂದ ಬುದ್ಧಿ ಇಲ್ಲದ ಮಕ್ಕಳು ರಸ್ತೆ ಮಧ್ಯೆಯೇ ಸಂಚರಿಸುತ್ತಾರೆ ಇವನ್ನೆಲ್ಲವನ್ನೂ ನೋಡಿಕೊಂಡು ಸಂಚಾರ ನಡೆಸಬೇಕು. ಆದರೆ ವಿಧಿ ನೆಟ್ಟಗಿಲ್ಲದಿದ್ದರೆ ಕೆಲವೊಮ್ಮೆ ಅಪಘಾತ ನಡೆಯುತ್ತದೆ. ಆಗ ಸಿಕ್ಕಿಬೀಳುವುದು ಕೂಡಾ ವಾಹನ ಚಾಲಕರೇ ಆಗಿರುತ್ತಾರೆ. ಒಟ್ಟಿನಲ್ಲಿ ಗುರುಪುರ ರಸ್ತೆ ಅಗಲಗೊಳ್ಳದಿದ್ದರೆ ಇಲ್ಲಿ ಇನ್ನಷ್ಟು ಅಪಘಾತ ನಡೆಯಬಹುದು. ಆದ್ದರಿಂದ ಜಿಲ್ಲಾಡಳಿತ ತಕ್ಷಣ ರಸ್ತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕೆಗೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಗುರುಪುರ ಜೀಪ್ ಚಾಲಕ ರಫೀಕ್ ಮತ್ತು ಸ್ಥಳಿಯ ವಾಹನ ಚಾಲಕರ ಅಭಿಪ್ರಾಯದಂತೆ ಒಂದಾ ಇಲ್ಲಿ ರಸ್ತೆ ಅಗಲೀಕರಣಕೊಳ್ಳಬೇಕು ಇಲ್ಲವಾದಲ್ಲಿ ಇಲ್ಲಿ ಮೇಲ್ಸೇತುವೆ ನಿರ್ಮಸಬೇಕು ಎಂದು ಅಭಿಪ್ರಾಯ ಪಡುತ್ತಾರೆ.
ಡೆಡ್ಲಿ ಸ್ಫಾಟ್ ಗಳು :
ಗುರುಪುರದ ಅಲೈಗುಡ್ಡೆ, ಅಣೆಬಳಿ, ಗುರುಪುರ ಜಂಕ್ಷನ್, ಸರಕಾರಿ ಕಾಲೇಜ್ ರಸ್ತೆ ತಿರುವು ರಸ್ತೆ ಹಾಗೂ ರೋಸಾಮಿಸ್ತಕಾ ತಿರುವು ರಸ್ತೆ ಇದು ಡೆಡ್ಲಿ ಸ್ಪಾಟ್ ಆಗಿ ಗುರುತಿಸಿಕೊಂಡಿದ್ದು ಇಲ್ಲಿ ಅನೇಕ ಅಪಘಾತ ಸಂಭವಿಸಿದೆ.
ಗುರುಪುರ ಬಲಿಪಡೆದದೆಷ್ಟು?

ಸುಮಾರು 15 ವರ್ಷಗಳ ಮುಂಚೆ ಇಲ್ಲೊಂದು ಸಿಪಿಸಿ ಕಂಪೆನಿಗೆ ಸೇರಿದ ಬಸ್ ಗುರುಪುರದ ಅಣೆಬಳಿ ಪಲ್ಟಿ ಹೊಡೆದು ಹತ್ತಕ್ಕೂ ಅಧಿಕ ಮಂದಿ ಮೃತಪಟ್ಟರೆ 20ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡಿದ್ದರು. ಇದು ಇಲ್ಲಿನ ಅತಿ ದೊಡ್ಡ ಅಪಘಾತವಾಗಿದ್ದು ಈಗಲೂ ಜನರು ಅದನ್ನು ನೆನಪಿಸುತ್ತಿದ್ದಾರೆ.
ಇಲ್ಲಿ ಸಣ್ಣಪುಟ್ಟ ಹಾಗೂ ಅನೇಕ ದುರಂತ ಅಪಘಾತಗಳು ಸಂಭವಿಸಿದೆ. ಅಲ್ಲದೆ ಹಲವಾರು ಮಂದಿ ಪಾದಾಚಾರಿಗಳು ಸಾವನ್ನಪ್ಪಿದ್ದಾರೆ. ಕಳೆದ ವರ್ಷ 2013ರ ಡಿ. 26ರಂದು ತೈಲ ಸಾಗಿಸುತ್ತಿದ್ದ ಬುಲೆಟ್ ಟ್ಯಾಂಕರೊಂದು ಬದಿಯ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸತ್ಯದೇವತಾ ಮಂದಿರಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಕಾಸರಗೋಡಿನ ಸುನೀತಾ ಕಾಮತ್ ಎಂಬವರು ಸ್ಥಳದಲ್ಲೇ ಮೃತಪಟ್ಟರೆ ಪಾದಾಚಾರಿ ಮಹಿಳೆ ರಾಧಾ ಹೆಗ್ಡೆ ಎಂಬವರು ಗಂಭೀರ ಗಾಯಗೊಂಡಿದ್ದರು. ಇದೇ ವರ್ಷ ಎಪ್ರಿಲ್ 16ರಂದು ಟಿಪ್ಪರ್ ಚಾಲಕನ ಅವಾಂತರಕ್ಕೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಸಂಬಂಧಿಯಾದ ಎರಡೂವರೆ ವರ್ಷದ ಬಾಲಕಿ ಹಷರ್ಿತಾ ಹಾಗು ಹದಿನೆಂಟು ವರ್ಷದ ಬಾಬು ಎಂಬವರು ದಾರುಣ ಅಂತ್ಯ ಕಂಡಿದ್ದರು. ಈ ಪೈಕಿ ಜಸ್ವಿನ್ದಾರ್(32) ಹಾಗೂ ದೀಪಕ್(40) ಎಂಬವರು ಗಂಭೀರ ಗಾಯಗೊಂಡಿದ್ದರು. ಇವರು ಉತ್ತರಾಖಾಂಡದ ಮೂಲದವರಾಗಿದ್ದಾರೆ. ಕಳೆದ ವರ್ಷ ಮೇ 4ರಂದು ಜೀಪ್ ಮತ್ತು ಸ್ಕೂಟಿ ಮಧ್ಯೆ ಅಪಘಾತ ಸಂಭವಿಸಿ ಅವನೀಲ್ ಪಾಸ್ ಎಂಬ ನಾಲ್ಕರ ಹರೆಯದ ಬಾಲಕ ಸ್ಥಳದಲ್ಲೇ ಮೃತಪಟ್ಟರೆ ಹಾಗೂ ಆತನ ತಾಯಿ ಗಂಭೀರ ಗಾಯಗೊಂಡಿದ್ದರು. ಇದೀಗ ರೋಹಿತ್ ಪ್ರಾಣಕಳೆದುಕೊಂಡಿದ್ದಾನೆ.


