ವೀರಕಂಭ:ದ.ಕ.ಜಿ.ಪಂ.ಸ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ 2016-17 ನೇ ಸಾಲಿನ ಶಾಲಾ ಮಂತ್ರಿ ಮಂಡಲ ರಚನೆಯಾಯಿತು. ಶಾಲಾ ನಾಯಕ ಸ್ಥಾನಕ್ಕೆ 5 ವಿದ್ಯಾರ್ಥಿಗಳು ಹಾಗೂ ಉಪನಾಯಕ ಸ್ಥಾನಕ್ಕೆ 3 ವಿದ್ಯಾರ್ಥಿ ಗಳು ನಾಮಪತ್ರವನ್ನು ಸಲ್ಲಿಸಿ ಸ್ಪರ್ಧಾ  ಕಣದಲ್ಲಿದ್ದರು.

DSC_8215 01
ಭವ್ಯ ಭಾರತದ ಕನಸು ಹೊತ್ತ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದಲ್ಲಿಯೇ ಪ್ರಜಾಪ್ರಭುತ್ವದ ಅರಿವನ್ನು ಬೆಳೆಸುವಲ್ಲಿ ಶಾಲಾ ಮಂತ್ರಿಮಂಡಲ ಸಹಾಯಕವಾಗಿದೆ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಪ್ರತ್ಯೇಕ ಚಿಹ್ನೆಗಳ ಮೂಲಕ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಮತ ಚಲಾಯಿಸುವ ಮೂಲಕ ತಮ್ಮ ನಾಯಕನ ಆಯ್ಕೆ ಮಾಡಲಾಯಿತು. ನಾಯಕನಾಗಿ 7 ನೇ ತರಗತಿಯ ಎಂ.ಎಸ್ ತರುಣ್ ಕುಮಾರ್ ಹಾಗೂ ಉಪನಾಯಕಿಯಾಗಿ ಅರ್ಪಿತಾ ಆಯ್ಕೆಯಾದರು.

ಇತರ ಸಹಾಯಕರಾಗಿ ಅಶ್ವಿನಿ ವಿದ್ಯಾಮಂತ್ರಿ, ಯಸ್ಮಿತ್ ಗೃಹ ಮಂತ್ರಿ, ಜಸ್ವಿತ್ ನೀರಾವರಿ ಮಂತ್ರಿ, ಪೂಜಾ ಸ್ವಚ್ಛತೆ ಮಂತ್ರಿ, ಕಿರಣ್ ಕ್ರೀಡಾ ಮಂತ್ರಿ, ಜಯಶ್ರೀ ಆರೋಗ್ಯ ಮಂತ್ರಿ, ದೀಕ್ಷಿತ್ ಸಾಂಸ್ಕೃತಿಕ ಮಂತ್ರಿ, ಖತೀಜ ರಫೀಝ ವಾರ್ತಾ  ಮಂತ್ರಿಯಾಗಿ ಹಾಗೂ ವಿರೋಧ ಪಕ್ಷದ ನಾಯಕಿಯಾಗೆ ಪ್ರಿಯಾ ಆಯ್ಕೆಯಾದರು. ಶಾಲಾ ಶಿಕ್ಷಕರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *