ಬಂಟ್ವಾಳ ಮೂಡಬಿದ್ರೆ ರಸ್ತೆಯ ಮಾಡಮ್ಮೆ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದಿರುವುದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿತು. ಬಸ್ಸು, ವಾಹನಗಳು ಸಿದ್ದಕಟ್ಟೆ – ಕರ್ಪೆ  ಮಾರ್ಗವಾಗಿ ಕಲ್ಕೂರಿ ಕ್ರಾಸ್ ಮಾಡಿ ಮಾಡಮೆ ಮುಖಾಂತರ ಸಂಚರಿಸುತ್ತಿದ್ದವು.

Exif_JPEG_420

Exif_JPEG_420

Exif_JPEG_420ಒಂದು ಮಹಿಳೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸ್ಥಳಕ್ಕೆ ತಾಲೂಕು ಪಂಚಾಯತ್ ಸದಸ್ಯರಾದ ಪ್ರಭಾಕರ ಪ್ರಭು ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಸುಂದರ ಶಾಂತಿ ಆಗಮಿಸಿ ಸಂಬಂಧಪಟ್ಟ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಮೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ ಮರ ತೆರವುಗೊಳಿಸಲು ಸೂಚಿಸಿದರು. ಸಿದ್ದಕಟ್ಟೆ ಮೆಸ್ಕಾಂ ಶಾಖಾಧಿಕಾರಿ ತಿಲಕ್ ಹಾಗೂ ಸಿಬ್ಬಂಧಿ ವರ್ಗ ಸ್ಥಳಕ್ಕೆ ಆಗಮಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳ ಕೋರಿಕೆಯ ಮೇರೆಗೆ ನೋಣಯ್ಯ ಶೆಟ್ಟಿಗಾರ್ ಸಿದ್ದಕಟ್ಟೆ, ಪ್ರಕಾಶ ಜೈನ್ ರಾಯಿ ಜೆ.ಸಿ.ಬಿ. ಹಾಗೂ ಜನರ ಮೂಲಕ ಶೀಘ್ರ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ದಾರಿ ಸುಗಮ ಮಾಡಲಾಯಿತು. ಈ ಹಿಂದಿನ ಕುಕ್ಕಿಪಾಡಿ ಗ್ರಾ.ಪಂಚಾಯತ್ನಲ್ಲಿ ಜರುಗಿದ 2 ಗ್ರಾಮ ಸಭೆಗಳಲ್ಲಿ ಈ ಮರವನ್ನು ತೆರವುಗೊಳಿಸಲು ಆಗ್ರಹಿಸಿದ್ದರು.

By Suddi9

Leave a Reply

Your email address will not be published. Required fields are marked *