ಕೈಕಂಬ: ಗುರುಪುರ ಕೈಕಂಬ ಸಮೀಪದ ಮಾರುಕಟ್ಟೆ ಬಳಿ ದೊಡ್ಡ ಗುಂಡಿಯೊಂದನ್ನು ತೆಗೆಯಲಾಗಿದ್ದು ಇದರಿಂದಾಗಿ ಪೈಪ್ ಹಾಳಾದ ಕಾರಣ ಕುಡಿಯಲು ಬಳಕೆಯಾಗಬೇಕಾಗಿದ್ದ ನೀರು ಪೋಲಾಗುತ್ತಿದೆ. ಕಳೆದ ಮೇ ತಿಂಗಳ ಅಂತ್ಯದಲ್ಲಿ ಈ ಗುಂಡಿಯನ್ನು ತೆಗೆಯಲಾಗಿದ್ದು, ಇದಕ್ಕೆ ಸಂಬಂಧಪಟ್ಟವರು ಈ ಗುಂಡಿಯನ್ನು ಮುಚ್ಚುವ ಗೋಜಿಗೆ ಹೋಗಿಲ್ಲ.
29 vp kaikamba gundi

6

29 vp kaikamba gundi 2

k 9

02

ಕೆಐಡಿಬಿ ಯೋಜನೆಯ ಪ್ರಕಾರ ಗುರುಪುರ ಹೊಳೆಯಿಂದ ನೀರನ್ನು ಮೇಲಕ್ಕೆತ್ತಿ ಅದನ್ನು ಶುದ್ಧೀಕರಿಸಿ ಕಂಪನಿಗಳಿಗೆ ಹಾಗೂ ಸಾರ್ವಜನಿಕರಿಗೆ ಮನೆಬಳಕೆಗೆ ಈ ನೀರನ್ನು ಬಳಸಲಾಗುತ್ತದೆ. ಕಳೆದ ಮೇ ತಿಂಗಳಲ್ಲಿ ಪೈಪ್ನಲ್ಲಿ ನೀರು ಸೋರಕೆಯಾದ ಕಾರಣ ಕಂಪನಿಯ ಕೆಲಸಗಾರರು ಬಂದು ನೀರು ಸೋರಿಕೆಯಾಗುವ ಜಾಗದಲ್ಲಿ ಗುಂಡಿ ತೋಡಿ ಹೋಗಿದ್ದರು. ಈ ಗುಂಡಿಯನ್ನು ಮುಚ್ಚದೆ ಆಗೆ ಬಿಟ್ಟಿದ್ದಾರೆ ಇಲ್ಲಿ ವಾಹನ ಸವಾರರಿಗೆ ಹಾಗೂ ನಡೆದುಕೊಂಡು ಹೋಗುವ ಜನರಿಗೆ ಬಾರಿ ತೊಂದರೆಯಾಗಿದೆ ಈ ಗೊಂಡಿಯಲ್ಲಿ ಈ ಗ ನೀರು ತುಂಬಿದ್ದು ಸ್ವಲ್ಪ ಎಚ್ಚರ ತಪ್ಪಿದ್ರು ಬೈಕ್ ಸವಾರರು ಈ ಗುಂಡಿಗೆ ಬೀಳುವ ಸಾಧ್ಯತೆ ಇದೆ.
ಈ ಗುಂಡಿಯಲ್ಲಿರುವ ಪೈಪನ್ನು ದುರಸ್ಥಿಪಡಿಸಿ ಗುಂಡಿಯನ್ನು ಮುಚ್ಚಲು ಹೋಗದ ಕಾರಣ ಈ ಪರಿಸ್ಥಿತಿ ಒದಗಿದೆ. ನೀರು ಪೋಲಾಗುವುದು ಒಂದು ಕಡೆಯಾದರೆ ಈ ಗುಂಡಿಯಿಂದ ಹಲವು ಸಮಸ್ಯೆಗಳೂ ಬಂದೊದಗಿದೆ. ಆದ್ದರಿಂದ ಸಂಬಂಧಪಟ್ಟವರು ಈ ಪೈಪನ್ನು ಸರಿಪಡಿಸಿ ಗುಂಡಿಯನ್ನು ಮುಚ್ಚಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *