ಮುಂಬಯ್  : ಹಿರಿಯ ಪತ್ರಕರ್ತ ಶೇಖರ ಅಜೆಕಾರು ಅವರ “ಕಾರ್ಲ ಗೈಡ್ ಬೂಕ್” 2016 ತಾಲೂಕಿನ ಮಾಹಿತಿಗಳು, ಸಂಪರ್ಕ ಸಂಖ್ಯೆಗಳೊಂದಿಗೆ ಬಿಡುಗಡೆಗೆ ಸಿದ್ಧತೆಗಳು ನಡೆಯಿತ್ತಿದೆ. ಪುಸ್ತಕದ ಮಾಹಿತಿ ಪತ್ರವನ್ನು ಮಹಾಕವಿ, ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಡಾ| ಎಂ.ವೀರಪ್ಪ ಮೊೈಲಿ ಅವರು ಇತ್ತೀಚಿಗೆ ಬಿಡುಗಡೆ ಮಾಡಿದರು.

“ನನಗೆ ರಾಜಕೀಯ ಶಕ್ತಿಯನ್ನು, ಮಹಾಕಾವ್ಯ ಬರೆಯಲು ಹುಮ್ಮಸ್ಸನ್ನು ನೀಡಿದ ನನ್ನ ಕಾರ್ಕಳ ಕ್ಷೇತ್ರದ ತಾಲೂಕಿನ ಕುರಿತ ಬಹುಮುಖಿ, ಬಹೂಪಯೋಗಿ ಕೃತಿಯನ್ನು ಅನುಭವಿ ಪತ್ರಕರ್ತ ಮಿತ್ರ ಅಜೆಕಾರು ಅವರು ಹೊರ ತರುತ್ತಿರುವುದು ಸಂತೋಷದ ಸಂಗತಿ ಎಂದು ಅವರು ಶುಭ ಹಾರೈಸಿದರು.

ಖ್ಯಾತ ಸಾಹಿತಿ, ಸಂಘಟಕ ಡಾ| ನಾ.ಮೊಗಸಾಲೆ, ಸಚಿವ ಕೆ.ಅಭಯಚಂದ್ರ ಜೈನ್, ಸಾಹಿತಿ ಕೆ.ಇ.ರಾಧಾಕೃಷ್ಣ, ನಿಕಟಪೂರ್ವ ಶಾಸಕ ಹೆಚ್.ಗೋಪಾಲ ಭಂಡಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ, ನಿವೃತ್ತ ಪೆÇೀಲಿಸ್ ಅಧಿಕಾರಿ ಜಿ.ಎ.ಭಾವಾ, ಕರ್ನಾಟಕ ಗಮಕ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್ ನಿಟ್ಟೆ, ಮೂಡುಬಿದಿರೆ ಪ್ರೆಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಗಣೇಶ ಕಾಮತ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.

Karla Guide Book Release

ಕಾರ್ಕಳ ಗೋಮಟೇಶ್ವರ ಮಸ್ತಕಾಭಿಷೇಕದ ಸಂದರ್ಭದಲ್ಲಿ ಕಾರ್ಕಳ ತಾಲೂಕು ಕೇಂದ್ರವನ್ನು ಪ್ರಧಾನವಾಗಿರಿಸಿ ಒಂದು ಕೃತಿಯನ್ನು ಹೊರತಂದಿದ್ದು ಈಗ ತಾಲೂಕು ವ್ಯಾಪ್ತಿಯಲ್ಲಿ ಸಂಪೂರ್ಣ ನೂತನ ಕೃತಿಯನ್ನು ಹೊರ ತರುತ್ತಿದ್ದೇನೆ ಎಂದು ಲೇಖಕ ಶೇಖರ ಅಜೆಕಾರು ತಿಳಿಸಿದ್ದಾರೆ.

ಕಾರ್ಕಳ ಶ್ರೀ ವೆಂಕಟ್ರಮಣ ದೇವಾಲಯದ ಪುನರ್‍ಪ್ರತಿಷ್ಠೆ, ಅತ್ತೂರು ಚರ್ಚ್‍ಗೆ ವಿಶ್ವ ಮಾನ್ಯತೆಯ ಕ್ಷಣಗಳು, ತಾಲೂಕಿನ ಜಿನಮಂದಿರಗಳ ಪರಿಚಯ, ತಾಲೂಕಿನ ಮಹಾಕವಿಗಳ ಪರಿಚಯ, ಇತ್ತೀಚಿನ ಪ್ರಮುಖ ಘಟನೆಗಳು ಮತ್ತು ಇತರ ಅನೇಕ ವಿಚಾರಗಳ ಕುರಿತು ಕೃತಿಯಲ್ಲಿ ಬರಹಗಳಿವೆ. ಹಿರಿಯ ಹರಿದಾಸ ಬಿ.ಸಿ ರಾವ್ ಅವರ ಬೆನ್ನುಡಿ, ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ ಬೋರ್ಗಲ್‍ಗುಡ್ಡೆ ಅವರ ಮುನ್ನುಡಿ ಇದೆ. ತಾಲೂಕಿನ 34 ಗ್ರಾಮ ಪಂಚಾಯತ್‍ಗಳ ಸಂಪರ್ಕ ಮತ್ತು ಸಾಮಾನ್ಯ ಮಾಹಿತಿಗಳು, ಸದಸ್ಯರ ಸಹಿತ ಪ್ರಮುಖರ ಸಂಪರ್ಕ ಸಂಖ್ಯೆಗಳು ಇವೆ. ನಿತ್ಯ ಬಳಕೆಯ ದೂರವಾಣಿ, ಮೊಬೈಲ್ ಮಾಹಿತಿಗಳು, ತಾಲೂಕಿನ ಪ್ರಮುಖ ಉದ್ಯಮಗಳ ಸಂಪರ್ಕ ಸಂಖ್ಯೆಗಳೊಂದಿಗೆ ಆಂಗ್ಲ ಭಾಷೆಯ ಡೆರಕ್ಟರಿ ವಿಶೇಷ ವಿಭಾಗವಿದೆ ಎಂದು ಅವರು ತಿಳಿಸಿದ್ದಾರೆ.

ವಿಶೇಷ ಆಗಸ್ಟ್ ಎರಡನೇ ವಾರದಲ್ಲಿ ಬಿಡುಗಡೆ ಆಗುವ ಈ ಕೃತಿಯನ್ನು ಜುಲೈ.15ರೊಳಗೆ ಮುಂಗಡ ಕಾಯ್ದಿರಿಸುವವರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ಪುಸ್ತಕದಲ್ಲಿ ಮುದ್ರಿಸಲಾಗುವುದು ಎಂದು ಶೇಖರ ಅಜೆಕಾರು ತಿಳಿಸಿದ್ದಾರೆ. ಮಾಹಿತಿಗಾಗಿ ಶೇಖರ ಅಜೆಕಾರು, ಅಂಚೆ ಅಜೆಕಾರು-574101 ಅಥವಾ 8710978593 / 9141685573 ದೂರವಾಣಿಗಳನ್ನು ಸಂಪರ್ಕಿಸ ಬಹುದು.

By suddi9

Leave a Reply

Your email address will not be published. Required fields are marked *