ವಿಟ್ಲ: ಜೇಸಿಐ ವತಿಯಿಂದ `ಗೋ ಗ್ರೀನ್’ ಕಾರ್ಯಕ್ರಮದಡಿಯಲ್ಲಿ 21 ಜೇಸಿಐ ಸದಸ್ಯರ ಮನೆಯ ಪರಿಸರದಲ್ಲಿ ಗಿಡಗಳನ್ನು ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಜೇಸಿಐ ವಲಯ ತರಬೇತಿ ವಿಭಾಗದ ನಿರ್ದೇಶಕ ಮೋಹನ ಮೈರ ರವರ ಮನೆ ಪರಿಸರದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜೇಸಿಐ ಅಧಯಕ್ಷ ಬಾಬು ಕೊಪ್ಪಳ, ನಿಕಟ ಪೂರ್ವಾಧ್ಯಕ್ಷ ಮೋಹನ ಎ, ಕಾರ್ಯದರ್ಶಿ ಲೂವಿಸ್ ಮಸ್ರೇನಸ್, ಸದಸ್ಯರುಗಳಾದ ಭಾಸ್ಕರ ಶೆಟ್ಟಿ, ಈಶ್ವರ ಭಟ್, ಚಂದ್ರಹಾಸ, ರಮೇಶ್ ಬಿ ಕೆ , ಸೋಮಶೇಖರ್, ಸಂಜೀವ ಎಂ ಎಸ್, ಅಣ್ಣಪ್ಪ ಸಾಸ್ತಾನ್, ವಿದ್ಯಾ ಮೋಹನ್ ಉಪಸ್ಥಿತರಿದ್ದರು
