ಉದ್ಯಮದಲ್ಲಿ ಅದೆಷ್ಟೋ ದೊಡ್ಡ ಮನಸ್ಸಿನ ಬಂಟರಿದ್ದಾರೆ: ಸುಧೀರ್ ಶೆಟ್ಟಿ
ಮುಂಬಯಿ: ಬಂಟರು ಇಲ್ಲದ ಕಾರ್ಯ ಕ್ಷೇತ್ರವಿಲ್ಲ. ಪರಿಶ್ರಮದ ಮೂಲಕ ಯಶಸ್ಸು ಸಾಧಿಸುತ್ತಿರುವ ಹೆಚ್ಚಿನ ಬಂಟರಲ್ಲಿ ಶ್ರೀಮಂತಿಕೆಯ ಜತೆಗೆ, ಹೃದಯ ಶ್ರೀಮಂತಿಕೆಯೂ ಮನೆಮಾಡಿದೆ. ಹೊಟೇಲ್ ಉದ್ಯಮದಲ್ಲಿ ಅದೆಷ್ಟೋ ದೊಡ್ಡ ಮನಸ್ಸಿನ ಬಂಟರಿದ್ದಾರೆ.ಅವರ ಜತೆಗೆ ಸಂಘ ಇನ್ನಷ್ಟು ಸ್ಪಂದಿಸಿದರೆ ನಿಧಸಂಗ್ರಹ ಕಷ್ಟದ ಕಾರ್ಯವೇನಲ್ಲ. ಬಂಟರ ಸಂಘ ಎಂಬುವುದ್ ನಮ್ಮ ತಾಯಿಗೆ ಸಮಾನ. ತಾಯಿಯನ್ನು ಪ್ರೀತಿಸುವುದು, ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಚರಿಷ್ಮಾ ಬಿಲ್ಡರ್ಸ್‍ನ ಆಡಳಿತ ನಿರ್ದೇಶಕ ಸುಧೀರ್ ವಿ.ಶೆಟ್ಟಿ ನುಡಿದರು.

Bunts Educational Programme-1

Bunts Educational Programme-2

Bunts Educational Programme-6 (1)

Bunts Educational Programme-6

Bunts Educational Programme-10

Bunts Educational Programme-11

Bunts Educational Programme-13

ಕಳೆದ ಆದಿತ್ಯವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದಲ್ಲಿನ ರಾಧಾಭಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ತನ್ನ ಶಿಕ್ಷಣ ಮತ್ತು ಸಮಾಜ ಕಲ್ಯಾಣಾಭಿವೃದ್ಧಿ ಸಮಿತಿಯು ದಿ| ವಾಸು ಕೆ.ಶೆಟ್ಟಿ ಸ್ಮಾರಣಾರ್ಥ ಚರಿಷ್ಮಾ ಬಿಲ್ಡರ್ಸ್‍ನ ಆಡಳಿತ ನಿರ್ದೇಶಕ ಸುಧೀರ್ ವಿ.ಶೆಟ್ಟಿ ಪ್ರಾಯೋಜಿಸಲ್ಪಟ್ಟ ಸಂಘದ ವಾರ್ಷಿಕ ಬೃಹತ್ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸುಧೀರ್ ಶೆಟ್ಟಿ ಮಾತನಾಡಿದರು.

ಸಂಘದ ಅಧ್ಯಕ್ಷ ಪ್ರಭಾಕರ್ ಎಲ್.ಶೆಟ್ಟಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ತನ್ನ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆÉಸಿದ್ದು, ಗೌರವ ಅತಿಥಿüಯಾಗಿ ತುಂಗಾ ಹೊಟೇಲು ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಸಮಾಜ ಕಲ್ಯಾಣ ಯೋಜನಾ ರೂವಾರಿ ಸುಧಾಕರ್ ಎಸ್.ಹೆಗ್ಡೆ ಉಪಸ್ಥಿತರಿದ್ದು ಸಮಾಜದ ನೂರಾರು ವಿದ್ಯಾಥಿರ್üಗಳಿಗೆ ವಾರ್ಷಿಕ ವಿದ್ಯಾಥಿರ್ü ವೇತನ, ವಿದ್ಯಾಥಿರ್üಗಳ ದತ್ತು ಸ್ವೀಕಾರ, ಪ್ರತಿಭಾ ಸಂಪನ್ನ ಶಿಕ್ಷಣ ವಂಚಿತ ವಿಕಲಚೇತನರಿಗೆ ಆಥಿರ್üಕ ಸಹಾಯ ಹಾಗೂ ವಿಧವಾ ಮಾಸಾಶನ ಸೇರಿದಂತೆ ಮತ್ತಿತರ ದೇಣಿಗೆಗಳನ್ನು ವಿತರಿಸಿ ಸಂದರ್ಭೋಚಿತವಾಗಿ ಮಾತನಾಡಿ ಮಕ್ಕಳ ಭವಿಷ್ಯಕ್ಕೆ ಶುಭಾರೈಸಿದರು.

ಬಂಟರ ಸಂಘವು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ, ಸಾಧನೆಯ ಮೂಲಕ ಸಂಘವನ್ನು ಕಟ್ಟಿದ ನಮ್ಮ ಹಿರಿಯರ ಕನಸಿನ ಉದ್ದೇಶವಿಂದು ಫಲ ನೀಡಿ ನನಸಾಗಿದೆ. ಇದನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ. ಮುಂಬಯಿಯಲ್ಲಿ ಆಥಿರ್sಕ ತೊಂದರೆಯಲಿರುವ ಬಂಟ ಕುಟುಂಬಗಳು ಬಹಳಷ್ಟಿವೆ. ಈ ಕುಟುಂಬಗಳು ಆಥಿರ್sಕವಾಗಿ ಬಲಿಷ್ಠವಾಗಲು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದು ಅತೀ ಅಗತ್ಯ. ಅನೇಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಬಂಟರ ಸಂಘವು ಬಂಟ ಸಮಾಜದ ಮಕ್ಕಳ ಶಿಕ್ಷಣಕ್ಕೆ ಸಹಾಯ, ಪೆÇ್ರೀತ್ಸಾಹ ನೀಡುತ್ತಾ ಬಂದಿದೆ. ಇದರ ಸದುಪಯೋಗವನ್ನು ಪಡೆಯಲು ಬಂಟ ವಿದ್ಯಾಥಿರ್sಗಳು ಮುಂದೆ ಬರಬೇಕು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಪ್ರಭಾಕರ್ ಶೆಟ್ಟಿ ತಿಳಿಸಿದರು.

ಸುಧಾಕರ ಹೆಗ್ಡೆ ಮಾತನಾಡಿ ಬಂಟರ ಸಂಘ ಮುಂದಿನ ವರ್ಷಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಯೋಜನೆಗಾಗಿ ಅದಷ್ಟು ನಿಧಿ ಸಂಗ್ರಹಕ್ಕೆ ತೊಡಗಬೇಕು. ಬಂಟ ವಿದ್ಯಾಥಿರ್sಗಳು ಐಎಎಸ್, ಐಪಿಎಸ್ ಹುದ್ದೆಗಳನ್ನು ಸೇರಿವ ಮೂಲಕ ಸಮಾಜದ, ದೇಶದ ಸೇವೆ ಮಾಡಬೇಕು. ಕಳೆದ 12 ವರ್ಷಗಳ ಹಿಂದೆ ಆರಂಭಗೊಂಡ ಬಗೆ ವಿಶೇಷತೆಯಿಂದ ಕೂಡಿದೆ. ಎಲ್ಲರ ಸಹಕಾರದಿಂದ ಈ ಸಮಿತಿ ಇಂದಿನವರೆಗೂ ಆಥಿರ್sಕ ಅಸಹಾಯಕ ಬಂಟರಿಗೆ ಶಿಕ್ಷಣ ನೆರವು ನೀಡಲು ಕಾರಣವಾಯಿತು ಎಂದರು.

ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಪ್ರಾಸ್ತವಿಕ ನುಡಿಗಳನ್ನಾಡಿ ಮಾತನಾಡಿ ಆರಂಭದಲ್ಲಿ ಸಣ್ಣ ಮೊತ್ತದಿಂದ ಮೊದಲ್ಗೊಂಡು ಈ ಸಹಾಯ ವಿತರಣಾ ಕಾರ್ಯಕ್ರಮ ಬರಬರುತ್ತಾ ಇದೀಗ 1.50 ಕೋಟಿ ಗಳಿಗೆಏರಿದೆ. ಈಬಾರಿ 3,100 ವಿದ್ಯಾಥಿರ್sಗಳಿಗೆ, 400 ಮಂದಿ ಸಮಾಜ ಬಾಂಧವರಿಗೆ, ಒಟ್ಟು 3,500 ಅರ್ಜಿದಾರರಿಗೆ ಸಹಾಯಧನ ವಿತರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಆಯ್ಕೆಮಾಡಿ 10ನೇ ತರಗತಿಯ ವರೆಗೆ ಸಂಪೂರ್ಣ ಖರ್ಚನ್ನು ಸಮಿತಿಯು ಭರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಮರಾಠಿ ಮಾಧ್ಯಮ ಶಾಲೆಯೊಂದನ್ನು ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗುವು ದು ಎಂದರು.

ಇದೇ ಶುಭಾವಸರದಲ್ಲಿ ಸಂಘದ ಸಂಚಾಲಕತ್ವದ ಎಸ್.ಎಂ ಶೆಟ್ಟಿ ಕಾಲೇಜು ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ, ಎಸ್.ಎಂ ಶೆಟ್ಟಿ ಜೂನಿಯರ್ ಕಾಲೇಜು ಪ್ರಾಂಶುಪಾಲೆ ಸೀಮಾ ಸಬ್ಲೊಕ್, ಕರ್ನಾಟಕ ಫ್ರೀ ನೈಟ್ ಹೈಸ್ಕೂಲುನ ಕೆ.ರಾಮಚಾರಿ, ನಿತ್ಯಾನಂದ ಫ್ರೀ ನೈಟ್ ಹೈಸ್ಕೂಲು ವರ್ಲಿ ಇದರ ಸೋಮಶೇಖರ ಹೆಗ್ಡೆ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಉಪಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ, ಜತೆ ಕೋಶಾಧಿಕಾರಿ ಮಹೇಶ್ ಎಸ್.ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಉಪ ಕಾರ್ಯಧ್ಯಕ್ಷ ಎಪ್ಪಣ್ಣ ಎಂ.ಶೆಟ್ಟಿ, ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್ ಮತ್ತು ಕೋಶಾಧಿಕಾರಿ ಸಿಎ| ರಮೇಶ್ ಎ.ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದರು.

ಗಣೇಶ್ ಎರ್ಮಾಳ್ ಬಳಗವು ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ತಂಡವನ್ನು ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಭಂಡಾರಿ ಅವರನ್ನೊಳಗೊಂಡು ಸುಧೀರ್ ವಿ.ಶೆಟ್ಟಿ ಗೌರವಿಸಿದರು. ಬಂಟಗೀತೆಯೊಂದಿಗೆ ಸಮಾರಂಭ ಆದಿಗೊಂಡಿದ್ದು, ಪ್ರಶಾಂತಿ ಡಿ.ಶೆಟ್ಟಿ ಪ್ರಾರ್ಥನೆಗೈದರು. ಅಶೋಕ್ ಪಕ್ಕಳ ಸ್ವಾಗತಿಸಿ, ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *