ಮುಂಬಯಿ, ಜೂ.06: ತುಳುವೆರೆ ಆಯನೊ ಕೂಟ ಬದಿಯಡ್ಕ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಡಿಸೆಂಬರ್ 9 ರಿಂದ 13 ರ ತನಕ ಬದಿಯಡ್ಕದಲ್ಲಿ ಜರಗುವ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಕಳೆದ ಶನಿವಾರ ತುಳುವೆರೆ ಆಯನೊ ಕೂಟದ ಸದಸ್ಯರು ಶ್ರೀ ಕ್ಷೇತ್ರ ಒಡಿಯೂರುಗೆ ಭೇಟಿಯಿತ್ತ ಸಂದರ್ಭದಲ್ಲಿ ಶ್ರೀಗಳು ಕಾರ್ಯಕ್ರಮಕ್ಕೆ ಒಡಿಯೂರು ಗ್ರಾಮ ವಿಕಾಸ ಯೋಜನೆ ಕಾಸರಗೋಡು ಇದರ ಸಹಯೋಗ ನೀಡುವುದರೊಂದಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

Tuluvere Aayano (Odiyoorushree)

ಈ ಸಂದರ್ಭದಲ್ಲಿ ಡಾ| ನಿರಂಜನ ರೈ ಉಪ್ಪಿನಂಗಡಿ, ಪೆÇ್ರ. ಎ.ಶ್ರೀನಾಥ್ ಕಾಸರಗೋಡು, ಡಾ| ರಾಜೇಶ್ ಆಳ್ವ ಬದಿಯಡ್ಕ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ನಿರಂಜನ ರೈ ಪೆರಡಾಲ, ಹರ್ಷ ರೈ ಪುಪುತ್ರಕಳ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *