ಪೊಳಲಿ: ಭಾರತ ಸರಕಾರದ ಸ್ವಚ್ಚ ಭಾರತ ಮಿಷನ್ ಯೋಜನೆಯಡಿಯಲ್ಲಿ ಘನ ತ್ಯಾಜ್ಯ ವಿಲೇವರಿ ಘಟಕಕ್ಕೆ 2011-12ನೇ ಶಾಲಿನಲ್ಲಿ ಮಂಜೂರಾದ ರೂ.20ಲಕ್ಷ ವೆಚ್ಚದ ಘನ ತ್ಯಾಜ್ಯ ಘಟಕದ ಉದ್ಘಾನೆಯು ಸೋಮವಾರ ಪೊಳಲಿ ಸರ್ವಮಂಗಳಾ ಸಭಾಂಗಣದಲ್ಲಿ ನೆರವೇರಿತು. ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ದೀಪಬೆಳಗಿಸಿ ಉದ್ಘಾಟಿಸಿ ಕರಿಯಂಗಳ ಗ್ರಾಮದ ಎಲ್ಲಾ ಅಂಗಡಿ ಮಾಲಕರು ಹೊಟೇಲ್ ಮಾಲಕರು ಸ್ವಚ್ಚತೆಯಲ್ಲಿ ಕೈಜೋಡಿಸಬೇಕು ಮನೆಮನೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಚೆಲ್ಲದೆ ಅದನ್ನು ಡೆಸ್ಕ್ಪಿನ್ ನಲ್ಲಿ ಶೇಖರಣೆ ಮಾಡಿ ತ್ಯಾಜ್ಯ ಸಾಗಟ ಮಾಡುವ ವಾಹನಕ್ಕೆ ತಂದುಕೊಟ್ಟು ಸಹಕರಿಸಲು ವಿನಂತಿಸಿದರು.6
4

5

 

1

2

3

ಮನೆಮನೆಯಲ್ಲಿ ಒಟ್ಟುಮಾಡಿಟ್ಟ ತ್ಯಾಜ್ಯ, ಪ್ಲಾಸ್ಟಿಕ್ ಮತ್ತು ಕೊಳಚೆ ವಸ್ತುಗಳನ್ನು ಪ್ರತೀ ವಾರಕ್ಕೆ ಮೂರು ಭಾರಿಯಂತೆ ಕರಿಯಂಗಳ ಗ್ರಾಮದ ಪೊಳಲಿ, ಪಲ್ಲಿಪಾಡಿ, ಪುಂಚಮೆ, ಬಡಕಬೈಲ್ ಈ ಪ್ರದೇಶದಲ್ಲಿ ರಸ್ತೆ ಇರುವ ಕಡೆಗೆ ಆಟೋ ಬಂದಾಗ ಅದಕ್ಕೆ ತ್ಯಾಜ್ಯ ವಸ್ತುಗಳನ್ನು ತಂದು ಹಾಕಿ ಸಹಕರಿಸಲು ತಿಳಿಸಿದರು.

ಜಿಲ್ಲಾ ಪಂಚಾಯತಿ ನೋಡಲ್ ಅಧಿಕಾರಿಯಾಗಿ ಆಗಮಿಸಿದ ಮಂಜುಳಾ ಅವರು ಕಸ ತ್ಯಾಜ್ಯ ಪ್ಲಾಸ್ಟಿಕ್ ಗಳನ್ನು ಅಲ್ಲಲ್ಲಿ ಚೆಲ್ಲುವವರ ವಿರುದ್ದಕಠಿಣ ಕ್ರಮತೆಗೆದುಕೊಳ್ಳಲು ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಸೂಚಿಸಿದರು,
ದಿಶಾ ಸಂಸ್ಥೆಯ ಸಿಲ್ವೇಸ್ಟರ್ ಅವರು ತ್ಯಾಜ್ಯ ವಸ್ತುಗಳಿಂದ ಯಾವುದೆಲ್ಲಾ ಉಪಯೋಗವಿದೆ ಎಂದು ವಿವರಿಸಿದರು ಗ್ರಾಮ ಪಂಚಾಯತ್ ಸದಸ್ಯರು ಇದಕ್ಕೆ ಸ್ಪಂದಿಸಿದರೆ ನಾವು ಸಹಕರಿಸುವುದಾಗಿ ಹೇಳಿದರು. ಅಧ್ಯಕ್ಷತೆಯನ್ನು
ಕರಿಯಂಗಳ ಗಾಮ ಪಂಚಾಯತಿ ಅಧ್ಯಕ್ಷೆ ಚಂದ್ರಾವತಿ ವಹಿಸಿದ್ದರು.

ವೇದಿಕೆಯಲ್ಲಿ ವಿಜಯಬ್ಯಾಂಕ್ ಪ್ರಭಂದಕ ಮಹೇಶ್ ಭಟ್, ಪೊಳಲಿ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕರಿ ವಿಜಯರವಿ ಪೆರ್ನಾಂಡಿಸ್, ಬೆಂಜನಪದವು ಆರೋಗ್ಯಧಿಕಾರಿ ಡಾ. ಜೀವನ್ ಲಸ್ರಾದೋ , ಪಿ.ಡಿಓ ನವೀನ್ ಭಂಡಾರಿ ಉಪಸ್ಥಿತರಿದ್ದರು , ಉಪಾಧ್ಯಕ್ಷ ಚಂದ್ರಶೇಖರ ರಾವ್ ಸ್ವಾಗತಿಸಿ ವಂದಿಸಿದರು. ಅಶ್ವಿನಿ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *