ಸಂಗಬೆಟ್ಟು:ದ.ಕ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಲವಾರು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ್ತವ್ಯವಿದ್ದು ಹಕ್ಕುಪತ್ರ ಸಿಗದೆ ಇರುವವರಿಗೆ ಸರಕಾರ ಕಂದಾಯ ಇಲಾಖೆಗೆ ತಿದ್ದುಪಡಿ ತಂದು 94ಸಿ ಅಡಿಯಲ್ಲಿ 3ಎಯಲ್ಲಿ ಅಜರ್ಿ ನೀಡಲು ಅವಕಾಶ ಮಾಡಿಕೊಟ್ಟಿದ್ದು ಗ್ರಾಮೀಣ ಭಾಗದವರಿಗೆ ತುಂಬಾ ಅನುಕೂಲಕರವಾಗಿದ್ದು ಸಂಬಂಧಪಟ್ಟವರು ತಕ್ಷಣದಿಂದ ತಮ್ಮ ಭಾವಚಿತ್ರ, ಮನೆಯೊಂದಿಗೆ ಅಜರ್ಿದಾರನ ಭಾವಚಿತ್ರ, ಯಾವುದಾದರೂ ಗುರುತುಚೀಟಿ, ಮನೆತೆರಿಗೆ ರಶೀಧಿ, ಮನೆಯ ವಿಸ್ತೀರ್ಣ, ಆದಾಯ ಪ್ರಮಾಣಪತ್ರ ಪ.ಜಾತಿ/ ಪ.ಪಂಗಡ ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರದೊಂದಿಗೆ ತಾಲೂಕು ಕಛೇರಿಗೆ ಅಜರ್ಿ ಸಲ್ಲಿಸುವಂತೆ ಸಂಗಬೆಟ್ಟು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭು ವಿನಂತಿಸಿದ್ದಾರೆ.
