ಮಂಗಳೂರು: ತುಳು ರಂಗಭೂಮಿ ಹಾಗೂ ತುಳುಚಿತ್ರರಂಗಲ್ಲಿ ಅವಿಸ್ಮರಣೀಯ ದಾಖಲೆ ಪ್ರದರ್ಶನ ಕಂಡ ಡಾ.ಪಿ. ಸಂಜೀವ ದಂಡಕೇರಿಯವರ `ಬಯ್ಯಮಲ್ಲಿಗೆ’ ತುಳುಟೆಲಿಫಿಲ್ಮ್ ಬಿಡುಗಡೆ ಸಮಾರಂಭ ಮೇ 15ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಬಂಟರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರರ. ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೇಯರ್ ಹರಿನಾಥ್ ಬಿ ಡಿವಿಡಿ ಬಿಡುಗಡೆಗೊಳಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ. ಮೋಹನ್ ಆಳ್ವಾ ಟೆಲಿಫಿಲ್ಮ್ ಚಾಲನೆಗೊಳಿಸಲಿದ್ದಾರೆ. ಉದಯವಾಣಿ ಪತ್ರಿಕೆಯ ಮನೋಹರ್ ಪ್ರಸಾದ್, ಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಉಮನಾಥ ಎ. ಕೋಟ್ಯಾನ್, ಚಲನಚಿತ್ರ ಕಲಾವಿದರಾದ ಜ್ಯೋತಿ ರೈ, ಬೇಬಿ ದಿಶಾ ರಾಮ್ ಉಪಸ್ಥಿತರಿರುವರು.
ಬಳಿಕ ಬಯ್ಯಮಲ್ಲಿಗೆ ಟೆಲಿಫಿಲ್ಮ್ನ ಪ್ರಧಾನ ದೃಶ್ಯಾವಳಿಯ ಪ್ರದರ್ಶನ ನಡೆಯಲಿದೆ.
