ಮಂಗಳೂರು:ಅಖಿಲ ಭಾರತ ಬ್ರಾಹ್ಮಣ ಒಕ್ಕೂಟದ ವತಿಯಿಂದ ಇಂದು ಉಷಾ ಕಾಲದಲ್ಲಿ ಶ್ರೀಕ್ಷೇತ್ರ ಕದ್ರಿಯಲ್ಲಿ ಮಳೆಗಾಗಿ ಪರ್ಜನ್ಯಜಪ, ರುದ್ರ ಪಾರಾಯಣ, ಶ್ರೀ ಸೂಕ್ತ ಹಾಗೂ ವಿಷ್ಣು ಸಹಸ್ರನಾಮವನ್ನು ಸಾಮೂಹಿಕವಾಗಿ ಪಠಿಸಲಾಯ್ತು. ಶ್ರೀ ಎಸ್.ಪ್ರದೀಪಕುಮಾರ ಕಲ್ಕೂರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಅರ್ಚಕರುಗಳಾದ ವಿಠಲದಾಸ ತಂತ್ರಿ, ರಾಮಅಡಿಗ, ರಾಮಕೃಷ್ಣ ಭಟ್ ಉಪಸ್ಥಿತರಿದ್ದರು. ಸಾಮೂಹಿಕ ಪ್ರಾರ್ಥನೆಯ ಬಳಿಕ ಸುಮಾರು ಎರಡೂವರೆ ಗಂಟೆಗಳ ಕಾಲ ಪರ್ಜನ್ಯಜಪ, ರುದ್ರ ಪಾರಾಯಣ ಹಾಗೂ ಇತರ ನಾಮಾರ್ಚನೆಗಳನ್ನು ಮಾಡಲಾಯ್ತು.

1

2

3

4

10

ಸಮತಾ ಬಳಗ, ಸುಬ್ರಹ್ಮಣ್ಯ ಸಭಾ, ಕೂಟ ಮಹಾಜಗತ್ತು, ಹವ್ಯಕ ಸಭಾ, ಲ್ಯಾಂಡ್‍ಲಿಂಕ್ಸ್‍ನ ವಿಪ್ರಸಮೂಹ, ಇತ್ಯಾದಿ ಸಂಘಟನೆಗಳ ಪ್ರತಿನಿಧಿಗಳಲ್ಲದೆ ನಾರಾಯಣಕಂಜರ್ಪಣೆ, ನಿತ್ಯಾನಂದ ಕಾರಂತ ಪೆÇಳಲಿ ಕೆ.ಎಸ್ ಕಲ್ಲುರಾಯ, ಸುಧಾಕರರಾವ್ ಪೇಜಾವರ, ಪೂರ್ಣಿಮಾ ರಾವ್ ಪೇಜಾವರ, ದಿನೇಶ್ ದೇವಾಡಿಗ, ಮೋಹನ ಕೊಪ್ಪಲ, ಅರುಣ್‍ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.

 

By suddi9

Leave a Reply

Your email address will not be published. Required fields are marked *