ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ದೇರಾಜೆ ಗುತ್ತು ಧರ್ಮ ಚಾವಡಿಯಲ್ಲಿ ಧರ್ಮನೇಮೋತ್ಸವ ಪ್ರಯುಕ್ತ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ `ಕರ್ಣಾರ್ಜುನ’ ತಾಳಮದ್ದಳೆ ಕೂಟ ಮಂಗಳವಾರ ಮಧ್ಯಾಹ್ನ ನಡೆಯಿತು.
ಬಂಟ್ವಾಳತಾಲ್ಲೂಕಿನ ಕೊಯಿಲ ಗ್ರಾಮದ ದೇರಾಜೆ ಗುತ್ತು ಧರ್ಮ ಚಾವಡಿಯಲ್ಲಿ ಧರ್ಮನೇಮೋತ್ಸವ ಪ್ರಯುಕ್ತ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ `ಕರ್ಣಾರ್ಜುನ’ ತಾಳಮದ್ದಳೆ ಕೂಟ ಮಂಗಳವಾರ ಮಧ್ಯಾಹ್ನ ನಡೆಯಿತು.

ಭಾಗವತರಾಗಿ ಪ್ರಸಾದ್ ಬಲಿಪ, ಗಿರೀಶ್ ರೈ ಕಕ್ಯಪದವು, ಚಂದ್ರಶೇಖರ ಕೊಂಕಣಾಜೆ ಚೆಂಡೆ, ಲಕ್ಷ್ಮೀಶ ಬದಿಯಡ್ಕ ಮದ್ದಳೆ, ದೇವಿಪ್ರಸಾದ್ ಗುರುವಾಯನಕೆರೆ ಚಕ್ರತಾಳದಲ್ಲಿ ಪಾಲ್ಗೊಂಡರು.
ಕರ್ಣನಾಗಿ ವಿಶ್ವೇಶ್ವರಭಟ್ ಸುಣ್ಣಂಬಳ, ಅರ್ಜುನನಾಗಿ ಜಬ್ಬಾರ್ ಸಮೋ ಸಂಪಾಜೆ, ಶಲ್ಯನಾಗಿ ವಾಸುದೇವ ರಂಗಭಟ್ ಮಧೂರು, ಕೃಷ್ಣನಾಗಿ ದಿನೇಶ್ ಶೆಟ್ಟಿ ಕಾವಳ ಕಟ್ಟೆ , ಸರ್ಪಾಸ್ತ್ರನಾಗಿ ಪ್ರೇಮ್‍ರಾಜ್ ಕೊೈಲ ಗಮನ ಸೆಳೆದರು. ಪ್ರಚಾರ ಸಮಿತಿ ಸದಸ್ಯ ಮೋಹನ್ ಕೆ.ಶ್ರೀಯಾನ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
