ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಆಮ್ ಆದ್ಮಿ ವಿಮಾ ಯೋಜನೆಯಡಿ ಇಲ್ಲಿನ ನಿವಾಸಿ ದಿವಂಗತ ರಾಮ ನಲ್ಕೆ ಎಂಬವರಿಗೆ ಮಂಜೂರಾದ ರೂ 31ಸಾವಿರ ಮೊತ್ತದ ವಿಮಾ ಪರಿಹಾರಧನ ಚೆಕ್ಕನ್ನು ಮೃತರ ತಾಯಿ ಗೋಪಿ ಮತ್ತು ಸಹೋದರ ಶ್ರಿಧರ ನಲ್ಕೆ ಅವರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಕಂಬಳಿ ಮತ್ತು ನರಿಕೊಂಬು ನಾಗರಿಕ ಸೇವಾ ಸಮಿತಿ ಮುಖಂಡ ಎನ್. ಪ್ರಕಾಶ್ ಕಾರಂತ ಇವರು ಮಂಗಳವಾರ ವಿತರಿಸಿದರು. ಪ್ರತಿಷ್ಟಾನ ಟ್ರಸ್ಟಿ ಕೆ.ಕೃಷ್ಣ ಕುಮಾರ್ ಪೂಂಜ, ಕೆ. ಭಾಸ್ಕರ ಚೌಟ, ಸೋಮಪ್ಪ ಕೋಟ್ಯಾನ್ ತುಂಬೆ, ಎಂ.ಕೆ.ಖಾದರ್ ಮಾರಿಪಳ್ಳ , ಸುರೇಶ್ ರೈ ಪೆಲಪಾಡಿ, ಪುರುಷ ಎನ್.ಸಾಲಿಯಾನ್, ಮೊನಪ್ಪ ಅಮೀನ್ ಮಾರಿಪಳ್ಳ, ಆನಂದ ಸಾಲಿಯಾನ್, ದಿವಾಕರ ಏಲಬೆ, ಯಮುನ ಅಂತರ, ಪ್ರಶಾಂತ್ ಕುಮಾರ್ ತುಂಬೆ ಮತ್ತಿತರರು ಇದ್ದರು.

