ಬಂಟ್ವಾಳ : ಜೀರ್ಣೋದ್ದಾರ ಗೊಳ್ಳಲಿರುವ ಕಕ್ಯಪದವು ಬ್ರಹ್ಮಬೈದರ್ಕಳ ಗರಡಿಯ ಪುನರ್ ನಿರ್ಮಾಣಕಾರ್ಯಕ್ಕೆ ಬಳಸಲ್ಪಡುವ ಶಿಲೆಗಳ ಮೆರವಣಿಗೆಯು ಭಾನುವಾರ ಜಕ್ರಿಬೆಟ್ಟು ಮೈದಾನದಿಂದ ಕಕ್ಯಪದವು ಗರಡಿ ಮೈದಾನದವರೆಗೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಉದ್ಯಮಿ ಸೇಸಪ್ಪ ಕೋಟ್ಯಾನ್ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. 01
ಕಾರ್ಕಳದಿಂದ ತಂದ ಶಿಲೆಗಳನ್ನು ಏಳು ಘನ ವಾಹನಗಳಲ್ಲಿ ಚೆಂಡೆ, ನಾಸಿಕ್ ಬ್ಯಾಂಡ್ ಹಾಗೂ ವಾದ್ಯವೃಂದದ ಸಡಗರದೊಂದಿಗೆ ಮೆರವಣಿಗೆಯಲ್ಲಿ ಒಯ್ಯಲಾಯಿತು. ಗರಡಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಗರಡಿ ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್, ಶಿಲ್ಪಿ ಸದಾಶಿವ ಗುಡಿಗಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಪದ್ಮಶೇಖರ ಜೈನ್, ತಾ.ಪಂ.ಸದಸ್ಯ ಸಂಜೀವಪೂಜಾರಿ, ಅಬ್ಬಾಸ್ ಆಲಿ, ಬೂಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಭೂ ನ್ಯಾಯ ಮಂಡಳಿ ಅಧ್ಯಕ್ಷ ಪರಮೇಶ್ವರ ನಾಯ್ಕ್, ಪ್ರಮುಖರಾದ ಸಂಪತ್ ಕುಮಾರ್ ಶೆಟ್ಟಿ, ಭುವನೇಶ್ ಪಚ್ಛಿನಡ್ಕ, ಪ್ರವೀಣ್ ಬಿ, ಬೇಬಿಕುಂದರ್, ಇಂಜಿನಿಯರ್ ಕಮಲ್ ಕುಮಾರ್, ಚೆನ್ನಪ್ಪ ಸಾಲ್ಯಾನ್, ಜಗದೀಶ್ ಕೊಲ, ರವಿ ಕಕ್ಕೆಪದವು, ಸಂಜೀವ ಪೂಜಾರಿ ಬತ್ತನಾಡಿ, ಡಾ. ದಿನೇಶ್ ಬಂಗೇರಾ, ಡಾ.ರಾಜಾರಾಮ್ ಕೆ.ಬಿ, ವೀರೇಂದ್ರ ಕುಮಾರ್ , ಗುಣಶೇಖರ್, ಉಳಿ ಗ್ರಾ.ಪಂ. ಸದಸ್ಯರಾದ ಸಂಜೀವ ಗೌಡ, ಚಿದಾನಂದ ರೈ, ಚೇತನ್, ಧರ್ಣಪ್ಪ ಪೂಜಾರಿ, ಜಯಶೆಟ್ಟಿ ಕಿಂಜಾಲು, ಮಡವು ದೇವಸ್ಥಾನ ಮೊಕ್ತೇಸರ ಮೋನಪ್ಪ ಪೂಜಾರಿ, ಬಡಗಕಜೆಕಾರು ಗ್ರಾ.ಪಂ. ಸದಸ್ಯ ಜಯಬಂಗೇರ , ದೇಜಣ್ಣ ಶೆಟ್ಟಿ, ರಾಜೇಶ್ ಸುವರ್ಣ, ವಾಸುದೇವ ಮಯ್ಯ, ಗಣೇಶ್ ಕೋಮುಜೆ, ಡೀಕಯ್ಯ ಕುಲಾಲ್ ಮತ್ತು ಗರಡಿ ಕ್ಷೇತ್ರದ ಸದಸ್ಯರು, ಊರ ಪ್ರಮುಖರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *