ವಿಟ್ಲ: ವಲಯ ದೇವಾಡಿಗ ಸಂಘದ ಬೆಳ್ಳಿ ಹಬ್ಬದ ಆಚರಣೆ ಸಲುವಾಗಿ ಸಂಘಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ 25 ಸಾವಿರ ರೂಪಾಯಿ ಚೆಕ್ಕನ್ನು ವಿಟ್ಲ ವಲಯ ಮೇಲ್ವಿಚಾರಕ ಜನಾರ್ಧನ ರವರು ದೇವಾಡಿಗ ಸಂಘದ ಅಧ್ಯಕ್ಷ ಜನಾರ್ಧನ ಎಂ ರವರಿಗೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಮಾನಾಥ ದೇವಾಡಿಗ ಮತ್ತು ಸೇವಾನಿರತ ಜನಾರ್ಧನ ಪದ್ಮಶಾಲಿ ಉಪಸ್ಥಿತರಿದ್ದರು 
