ಮಂಗಳೂರು : ಯಕ್ಷಗಾನ ರಂಗದ ಪ್ರಸಿದ್ಧ ವೇಷಧಾರಿ, ತೆಂಕುತಿಟ್ಟಿನ ಚರಿತ್ರ ನಟ, ರಾಜ್ಯ ಪ್ರಶಸ್ತಿ ಪುರಸ್ಕೃತ ದಿ| ಅಳಿಕೆ ರಾಮಯ್ಯ ರೈ ಅವರ ಸ್ಮರಣಾರ್ಥ ನೀಡಲಾಗುವ `ಅಳಿಕೆ ಯಕ್ಷ ಸಹಾಯ ನಿಧಿ’ಗೆ 2015-16ನೇ ಸಾಲಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಮತ್ತು ಪ್ರಸಂಗಕರ್ತ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಮತ್ತು ಹಿರಿಯ ವೇಷಧಾರಿ ಬೆಳ್ಳಾರೆ ವಿಶ್ವನಾಥ ರೈ ಅವರು ಆಯ್ಕೆಯಾಗಿದ್ದಾರೆ. ಟ್ರಸ್ಟ್ ಸಲಹೆಗಾರರಾದ ಡಾ| ಎಂ. ಪ್ರಭಾಕರ ಜೋಶಿ, ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಉಮೇಶ ಶೆಟ್ಟಿ ಉಬರಡ್ಕ ಇವರನ್ನೊಳಗೊಂಡ ಸಮಿತಿಯ ಶಿಫಾರಿಸಿನಂತೆ ಈ ಇಬ್ಬರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಸಹಾಯ ನಿಧಿಯು ತಲಾ ರೂ.10,000/- ನಗದು ಮತ್ತು ಸಮ್ಮಾನ ಫಲಕಗಳನ್ನೊಳಗೊಂಡಿರುತ್ತದೆ. 2009ರಲ್ಲಿ ಸ್ಥಾಪನೆಯಾದ ‘ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್’ ವತಿಯಿಂದ ಈ ವರೆಗೆ ಅಶಕ್ತ ಕಲಾವಿದರಾದ ಪಕಳಕುಂಜ ಕೃಷ್ಣ ನಾಯ್ಕ, ಪುಂಜಾಲಕಟ್ಟೆ ಧರ್ಣಪ್ಪ ಶೆಟ್ಟಿ, ಕೊರಗಪ್ಪ ನಾಯ್ಕ ಖಂಡೇರಿ, ಕಾಂಚನ ಸಂಜೀವ ರೈ, ಉದ್ಯಾವರ ಜಯಕುಮಾರ್, ಸುಜನಾ ಸುಳ್ಯ, ಪುತ್ತೂರು ಚಂದ್ರಶೇಖರ ಹೆಗ್ಡೆ, ಗಣೇಶ ಕೊಲೆಕಾಡಿ ಮತ್ತು ಉದಯ ನಾವಡ ಮಧೂರು ಇವರಿಗೆ ಅಳಿಕೆ ಯಕ್ಷ ಸಹಾಯನಿಧಿಯನ್ನು ನೀಡಲಾಗಿದೆ.
ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ :
ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸಮೀಪ ಅಜ್ಜಿಬೆಟ್ಟು ಗ್ರಾಮದಲ್ಲಿ ಜುಲೈ 24, 1957ರಲ್ಲಿ ಜನಿಸಿದ ವಿಶ್ವನಾಥ ಶೆಟ್ಟಿ ದಿ| ಕೊರಗಪ್ಪ ಶೆಟ್ಟಿ ಮತ್ತು ರೇವತಿ ದಂಪತಿಯ ಐದು ಮಂದಿ ಮಕ್ಕಳಲ್ಲಿ ಹಿರಿಯರು. ಪದವಿ ಪೂರ್ವ ಶಿಕ್ಷಣ ಪೂರೈಸಿ ಕೆಲಕಾಲ ಖಾಸಗಿ ಸಂಸ್ಥೆಗಳಲ್ಲಿ ದುಡಿದ ಅವರು ಸಹಜ ಆಸಕ್ತಿಯಿಂದ ಆರಿಸಿಕೊಂಡಿದ್ದು ಯಕ್ಷಗಾನ ವ್ಯವಸಾಯವನ್ನು. ಕಟೀಲು, ಕನರ್ಾಟಕ, ಕದ್ರಿ, ಸಾಲಿಗ್ರಾಮ, ಮಂಗಳಾದೇವಿ, ಹಿರಿಯಡ್ಕ ಹೀಗೆ ತೆಂಕು-ಬಡಗು ಮೇಳಗಳಲ್ಲಿ ಸುಮಾರು 35 ವರ್ಷಗಳ ತಿರುಗಾಟ ಮಾಡಿರುವ ಅವರು ತಾಳಮದ್ದಳೆ ರಂಗದ ಪ್ರಮುಖ ಅರ್ಥಧಾರಿಗಳಾಗಿಯೂ ಕಾಣಿಸಿಕೊಂಡರು.
ರಾಮ, ಕೃಷ್ಣ, ಸುಧನ್ವ, ಭೀಷ್ಮ, ರುಕ್ಮಾಂಗದ, ಈಶ್ವರ, ಪರಶುರಾಮ, ವಾಮನ, ವಾಲ್ಮೀಕಿ, ವಿದುರ, ಜಾಂಬವ, ಹನೂಮಂತ, ಸಂಜಯ, ಧರ್ಮರಾಯ, ಕರ್ಣ, ಅಜರ್ುನ ಇತ್ಯಾದಿ ಅವರಿಗೆ ಹೆಸರು ತಂದ ಪಾತ್ರಗಳು. ತುಳು ಪ್ರಸಂಗಗಳ ಪೆರುಮಳ ಬಲ್ಲಾಳ, ಮಲ್ಲಯ್ಯ ಬುದ್ಯಂತ, ಬಂಗರಸು, ಕಾಂತುಪೂಂಜ, ಕೊಡ್ಸರಾಳ್ವ ಮೊದಲಾದ ಪಾತ್ರಗಳಿಗೆ ಅವರು ಜೀವತುಂಬಿದ್ದಾರೆ. ಯಕ್ಷಗಾನ ಪ್ರಸಂಗ ರಚನೆಯಲ್ಲೂ ಸಿದ್ಧಹಸ್ತರಾದ ಸಿದ್ಧಕಟ್ಟೆ ವರ್ಣವೈಷಮ್ಯ, ವಿಷಮಸಮರಂಗ, ಕನ್ಯಾಂತರಂಗ, ಶ್ರೀರಾಮಸೇತು, ಶಶಿವಂಶವಲ್ಲರಿ, ಜ್ವಾಲಾ-ಜಾಹ್ನವಿ, ಚಾಣಕ್ಯ ತಂತ್ರ (ಕನ್ನಡ) ಬೊಳ್ಳಿದಂಡಿಗೆ, ಕೆಂಡಸಂಪಿಗೆ, ರತ್ನರಾಧಿಕೆ, ಪಟ್ಟದದೈವ, ಗರುಡರೇಖೆ (ತುಳು) ಮುಂತಾದ ಯಶಸ್ವೀ ಪ್ರಸಂಗಗಳ ಮೂಲಕ ಜನಪ್ರಿಯರಾಗಿದ್ದಾರೆ.
ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಮುಂಬೈ ಅಜೆಕಾರು ಕಲಾಭಿಮಾನಿ ಬಳಗ `ಯಕ್ಷರಕ್ಷಾ ಪ್ರಶಸ್ತಿ’ ಅರುವ ಕೊರಗಪ್ಪ ಶೆಟ್ಟಿ ಪ್ರಶಸ್ತಿ, ಸ್ಕಂದ ಪುರಸ್ಕಾರ ಇತ್ಯಾದಿ ಗೌರವಗಳನ್ನು ಪಡೆದಿರುವ ವಿಶ್ವನಾಥ ಶೆಟ್ಟರು ಪತ್ನಿ ಜಯಂತಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಹೊಂದಿದ್ದಾರೆ. ಇತ್ತೀಚೆಗೆ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ತುತ್ತಾದ ಅವರು ಮೆದುಳು ಶಸ್ತ್ರಕ್ರಿಯೆಗೆ ಒಳಗಾಗಿದ್ದಾರೆ. ಇದೀಗ ಯಕೃತ್ತು ಹಾಗೂ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
siddakkate

bellare

ಬೆಳ್ಳಾರೆ ವಿಶ್ವನಾಥ ರೈ :
ಬೆಳ್ಳಾರೆ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ದಂಪತಿಗೆ ಫೆಬ್ರವರಿ 28, 1951 ರಲ್ಲಿ ಜನಿಸಿದ ವಿಶ್ವನಾಥ ರೈ ಅವರಿಗೆ ಈಗ 65ರ ಹರೆಯ. ದಿ| ಅಚ್ಚುತ ಮಣಿಯಾಣಿ, ರಾಜನ್ ಅಯ್ಯರ್ ಹಾಗೂ ಮಾಸ್ಟರ್ ಕೇಶವರಿಂದ ಯಕ್ಷಗಾನ ಮತ್ತು ಭರತನಾಟ್ಯಗಳನ್ನು ಕಲಿತ ಅವರು ಸ್ತ್ರೀ-ಪುರುಷ ಪಾತ್ರಗಳಲ್ಲಿ ಪರಿಣತರು. ಕರ್ನಾಟಕ ಮೇಳವೊಂದರಲ್ಲೇ 34ವರ್ಷಗಳ ಸೇವೆಸಲ್ಲಿಸಿದ್ದು, ಮಧೂರು, ಸುರತ್ಕಲ್, ಕದ್ರಿ, ಬಪ್ಪನಾಡು, ಕುಂಟಾರು, ಎಡನೀರು, ಕಟೀಲು, ಕೊಲ್ಲಂಗಾನ – ಹೀಗೆ ತೆಂಕುತಿಟ್ಟಿನ ಹಲವು ಮೇಳಗಳಲ್ಲಿ ಒಟ್ಟು 54ವರ್ಷಗಳ ತಿರುಗಾಟ ಮಾಡಿದ್ದಾರೆ.
ಅಭಿಮನ್ಯು-ಬಭ್ರುವಾಹನ, ರಾಮ, ಲಕ್ಷ್ಮಣ, ಕೃಷ್ಣ, ಅಜರ್ುನ, ಧರ್ಮರಾಯ, ಸೀತೆ, ದ್ರೌಪದಿ, ಮೋಹಿನಿ, ಪ್ರಭಾವತಿ ಪಾತ್ರಗಳು ಅವರಿಗೆ ಕೀತರ್ಿ ತಂದಿವೆ. ತುಳು ಪ್ರಸಂಗಗಳಲ್ಲೂ ಜನಪ್ರಿಯರಾಗಿದ್ದ ಬೆಳ್ಳಾರೆ ವಿಶ್ವನಾಥ ರೈ `ಕಾಡಮಲ್ಲಿಗೆ’ಯ ಮಲ್ಲಿಗೆ ಪಾತ್ರದಲ್ಲಿ ಅಪಾರ ಖ್ಯಾತಿಗಳಿಸಿದ್ದಾರೆ. ಮಾಸ್ಟರ್ ಹಿರಣ್ಣಯ್ಯರಿಂದ ಚಿನ್ನದ ಉಂಗುರ ಸೇರಿದಂತೆ ಮುಂಬಯಿ ಹಾಗೂ ಹುಟ್ಟೂರಲ್ಲಿ ಹಲವು ಸನ್ಮಾನ ಗಳಿಸಿದ್ದು ಎಸ್.ಡಿ.ಎಂ. ಲಾ ಕಾಲೇಜಿನ `ಯಕ್ಷೊತ್ಸವ’ ದ ತೀರ್ಪು ಗಾರರಾಗಿಯೂ ಗಮನ ಸೆಳೆದಿದ್ದಾರೆ. ಕರ್ನಾಟಕ ಮೇಳದಲ್ಲಿ ಅಳಿಕೆ ರಾಮಯ್ಯ ರೈ ಮತ್ತು ಬೋಳಾರ ನಾರಾಯಣ ಶೆಟ್ಟರೊಂದಿಗೆ ಸುದೀರ್ಘ ಕಾಲ ಪಾತ್ರ ವಹಿಸಿದ್ದ ಬೆಳ್ಳಾರೆ ವಿಶ್ವನಾಥ ರೈ ಅವರಿಗೆ 2014ರಲ್ಲಿ ‘ಬೋಳಾರ ಪ್ರಶಸ್ತಿ’ ದೊರಕಿದೆ. ಇದೀಗ ಅಳಿಕೆಯವರ ಹೆಸರಿನ ಗೌರವವೂ ಅವರಿಗೆ ಸಲ್ಲುತ್ತಿರುವುದು ಯೋಗಾಯೋಗ.
ಇದೇ ಮೇ 5, 2016ರಂದು ಶುಕ್ರವಾರ ಅಳಿಕೆ ಟ್ರಸ್ಟ್ ಪದಾಧಿಕಾರಿಗಳು ಅನಾರೋಗ್ಯದಲ್ಲಿರುವ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಮತ್ತು ಬೆಳ್ಳಾರೆ ವಿಶ್ವನಾಥ ರೈ ಅವರ ನಿವಾಸಕ್ಕೆ ತೆರಳಿ ಗೃಹ ಸಮ್ಮಾನದೊಂದಿಗೆ ಇಬ್ಬರಿಗೂ ತಲಾ 10,000/- ಸಹಾಯ ನಿಧಿ ಹಾಗೂ ಸಮ್ಮಾನ ಫಲಕಗಳನ್ನು ಹಸ್ತಾಂತರಿಸಲಿದ್ದಾರೆ.
ಭಾಸ್ಕರ ರೈ ಕುಕ್ಕುವಳ್ಳಿ, ಬಜನಿ ಮಹಾಬಲ ರೈ ,ಅಳಿಕೆ ದುರ್ಗಾಪ್ರಸಾದ್ ರೈ ಮುಖ್ಯ ಸಲಹೆಗಾರರ ಕೆ. ಲಕ್ಷ್ಮೀನಾರಾಯಣ ರೈ ಹರೇಕಉಪಸ್ಳಥಿತರಿರುವರು,.

By suddi9

Leave a Reply

Your email address will not be published. Required fields are marked *