ಬೆಂಜನಪದವು ; ಸರಕರಿ ಪದವಿ ಪೂರ್ವ ಕಾಲೇಜು ಬೆಂಜನಪದವು ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ದಿನಾಂಕ 31-05-2014 ರಂದು ಅತ್ಯಂತ ಸಂಭ್ರಮದಿಂದ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.ಶಾಲಾ ಆವರಣ ಮತ್ತು ತರಗತಿ ಕೋಣೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಉಪಪ್ರಾಂಶುಪಾಲರಾದ ಶ್ರೀ.ಎಸ್.ಎನ್.ಮೈಲಾರ್.ಇವರು 8ನೇತರಗತಿಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾಥರ್ಿಗಳು ಮತ್ತು ವಿದ್ಯಾಥರ್ಿ ಹೆತ್ತವರನ್ನು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನೂ ಆದರದಿಂದ ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.ಶಾಲಾಭಿವೃಧ್ಧಿ ಸಮಿತಿಯ ಕಾಯರ್ಾಧ್ಯಕ್ಷರೂ ಹಾಗೂ ಕರಿಯಂಗಳ ಗ್ರಾಮಪಂಚಾಯತ್ ಅಧ್ಯಕ್ಷರೂ ಆದ ಶ್ರೀ ಚಂದ್ರಶೇಖರ ಭಂಡಾರಿ ಇವರು ಸರಕಾರದಿಂದ ಕೊಡಮಾಡಿದ ಉಚಿತ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಿ, ಪ್ರಸಕ್ತ ಶೈಕ್ಷಣಿಕ ವರ್ಷವು ಸಂತಸದಾಯಕವಾಗಿ ಹರ್ಷದ ಕಲಿಕೆಯು ಕಂಡುಬರಲಿ ಎಂದು ಶುಭ ಹಾರೈಸಿದರು.ಶಾಲಾಭಿವೃಧ್ಧಿ ಸಮಿತಿಯ ಸದಸ್ಯರುಗಳು ಹಾಗೂ ವಿದಾಥರ್ಿ ಹೆತ್ತವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಶಿಕ್ಷಕರಾದ ಶ್ರೀ ದೇವದಾಸ್ ಕೆ. ಮತ್ತು ಶ್ರೀದೇವಿ.ಪಿ.ಇವರು ಕಾರ್ಯಕ್ರಮ ನಿರ್ವಹಿಸಿದರು.ಎಲ್ಲಾ ಅಧ್ಯಾಪಕವೃಂದದವರೂ ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದಾಥರ್ಿಗಳಿಗೆಲ್ಲರಿಗೂ ಸಿಹಿ ತಿಂಡಿವಿತಿಸಲಾಯಿತು.
