ಭವಿಷ್ಯದ ಸುಂದರ ಕನಸುಗಳನ್ನು ಹೊತ್ತು ಬಾಳಿ ಬದುಕಬೇಕಾದ. ಒಂದು ಜೀವ ವಿಧಿಯಾಟದ ಮುಂದೆ ಇಂದು ಸೋತು ಹೋಗಿದೆ.
ಮಂಜೇಶ್ವರ ಬಟ್ಯಪದವು ನಿವಾಸಿ ಕೃಷ್ಣ. ಮೂಲ್ಯ ಹಾಗು ಗೀತ ದಂಪತಿಯ ಪುತ್ರ ವಿನೀತ್ ರಾಜ್ ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬದುಕಿನ ಬಂಡಿಯನ್ನು ಓಡಿಸಲು ಇಲೆಕ್ಟ್ರಿಷನ್ ವೃತ್ತಿಯನ್ನು ಮಾಡುತ್ತಿದ್ ವಿನೀತ್ ರಾಜ್ ವಿದ್ಯುತ್ ಶಾಕ್ ತಗುಲಿ ಕಟ್ಟಡದಿಂದ ನೆಲಕ್ಕುರುಳಿ ಮೆದುಳು ನಿಷ್ಕ್ರಿಯಗೊಂಡು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸುಪುತ್ರನನ್ನು ಕಳೆದುಕೊಂಡು ಕುಟುಂಬ ದುಃಖದ ಮಡುವಿನಲ್ಲಿದೆ.
ಕಡುಬಡತದಲ್ಲಿರುವ ಇವರ ಕುಟುಂಬಕ್ಕೆ ಇವರ ದಿನ ಕೂಲಿ ಮಾಡಿ ಬರುವ ಆದಾಯದಲ್ಲಿ ಸಂಸಾರ ಸಾಗಿಸುತಿದ್ದು. ಇದರಿಂದಗಿ ಇವರ ಕುಟುಂಬ ಕಂಗಾಲಾಗಿದ್ದು ಸಹಾಯಹಸ್ತ ಎದುರುನೋಡುತಿದ್ದರೆ.ಇವರ ಸಹಾಯಕ್ಕೆ ವಾಟ್ಸ್ಅಪ್ ನಲ್ಲಿ ಕಾರ್ಯಚರಿಸುತಿದ್ದ ಹಿಂದು ಗಟ್ಸ್ ಯೆಂಬ ಯುವಕರ ಗ್ರೂಪೊಂದ್ದು ಮುಂದೆ ಬಂದಿರುವುದು ಸುಮಾರು 25,000 ರೂಗಳ ಸಹಾಯಹಸ್ತ ನೀಡಿರುವುದು ತುಂಬ ಸಂತಸ ತಂದಿರುವ ವಿಶೇಷ.
