ಬಂಟ್ವಾಳ : ಸೇವಾಂಜಲಿ ಪ್ರತಿಷ್ಟಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಜ/ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ , ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ 81ನೇ ರಕ್ತದಾನ ಶಿಬಿರವು ಹೋಟೇಲ್ ರಂಗೋಲಿ ಸಭಾಂಗಣದಲ್ಲಿ ಜರಗಿತು. ಸಾಮಾಜಿಕ ಕಾರ್ಯಕರ್ತ ದೇವದಾಸ್ ಶೆಟ್ಟಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
KAR_5063
ಈ ಸಂದರ್ಭದಲ್ಲಿ ನರಿಕೊಂಬು ನಾಗರಿಕ ಜಾಗೃತಿ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್, ರೋಟರಿ ಪದಾಧಿಕಾರಿಗಳಾದ ಸಂಜೀವ ಪೂಜಾರಿ, ನಾರಾಯಣ ಹೆಗ್ಡೆ, ಸದಾನಂದ ಶೆಟ್ಟಿ ರಂಗೋಲಿ, ಭೂ ಬ್ಯಾಂಕ್ ನಾಮ ನಿದರ್ೇಶಿತ ಸದಸ್ಯ ಪ್ರಕಾಶ್ ಬಿ ಶೆಟ್ಟಿ, ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ಪ್ರಮುಖರಾದ ವಿಠಲ ಬಂಗೇರಾ, ಎಂ.ಕೆ.ಖಾದರ್, ಆರ್.ಎಸ್.ಜಯ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *