ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ ಬಂಟ್ವಾಳ , ಕಾರ್ಮಿಕ ಇಲಾಖೆ ಮತ್ತು ಮೆ.ಭಾರತ್ ಬೀಡಿ ವರ್ಕ್ರಸ್ ಕೈಕುಂಜೆ ಬಿ.ಸಿ.ರೋಡ್ ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಭಾರತ್ ಬೀಡಿ ವಕ್ಸರ್್ನ ಸಭಾ ಭವನದಲ್ಲಿ ಗೌ/ಹೆಚ್ಚುವರಿ ನ್ಯಾಯಾ ಧೀ ಶರಾದ ಆರ್.ಮಹೇಶ್ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿ ವಕೀಲ ಶ್ರೀನಿವಾಸ ದೈಪಲ ಬಾಲ ಕಾರ್ಮಿಕರು , ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಸವಲತ್ತು ಗಳ ಬಗ್ಗೆ ಮಾಹಿತಿ ನೀಡಿದರು. ಭಾರತ್ ಬೀಡಿ ವಕ್ಸರ್್ ನ ವ್ಯವಸ್ಥಾಪಕ ಕೆ.ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಮರ್ಿಕ ನಿರೀಕ್ಷಕಿ ನೆಸ್ಲಿನ್ ಗ್ರೇಸಿ, ವಕೀಲರ ಸಂಘದ ಅಧ್ಯಕ್ಷ ವೆಂಕಟರಮಣ ಶೆಣೈ, ಪ್ರಧಾನ ಕಾರ್ಯದರ್ಶಿ ರಾಜಾರಾಮ ನಾಯಕ್, ಉಪಾಧ್ಯಕ್ಷ ಸುರೇಶ್ ಕುಮಾರ್ ನಾವೂರು, ಜತೆ ಕಾರ್ಯದರ್ಶಿ ವಿನೋದ ಎಸ್., ಕೋಶಾಧಿಕಾರಿ ವಿರೇಂದ್ರ ಸಿದ್ದಕಟ್ಟೆ, ನ್ಯಾಯವಾದಿಗಳಾದ ಸತೀಶ್ ಬಿ., ಗಣೇಶ್ ಪೈ, ನರೇಂದ್ರನಾಥ ಭಂಡಾರಿ, ಸಿಬ್ಬಂದಿ ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
