ಬಂಟ್ವಾಳ, ಮೇ.2: ಪದವಿ ಶಿಕ್ಷಣದ ಜೊತೆಗೆ ಭಾರತದ ಸಂಸ್ಕøತಿಯನ್ನು ಮೈಗೂಡಿಸಿಕೊಂಡು ದೇಶಕ್ಕೆಉತ್ತಮ ರಾಯಭಾರಿಗಳಾಗಿ ಎಂದುಡಾ. ಬಸವರಾಜ್ ಬೆಂಗಳೂರು ಹೇಳಿದರು.
ಅವರುಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆಕಾಲೇಜಿನಅಂತಿಮ ಪದವಿ ವಿದ್ಯಾರ್ಥಿಗಳ ದೀಪ ಪ್ರದಾನ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಹಿಂದು ಸಂಸ್ಕøತಿಗೆ ಸುಮಾರು ವರ್ಷಗಳ ಇತಿಹಾಸವಿದೆ.ಆದ್ದರಿಂದ ಭಾರತದೇಶದ ಶ್ರೇಷ್ಠತೆ ಎಂದಿಗೂ ಕಡಿಮೆ ಎನಿಸಿಲ್ಲ. ಅಂತಹದೇಶದ ಪ್ರಜೆಯಾಗಿ ಹೊರಹೊಮ್ಮುತ್ತಿರುವುದು ಸಂತಸದ ಸಂಗತಿಎಂದರು.
ಎನ್.ಆರ್.ಐ (ದುಬೈ)ಮೆಕಾನಿಕಲ್‍ಇಂಜಿನಿಯರ್‍ದೇವಿಪ್ರಸಾದ್‍ರಾವ್ ಮಾತನಾಡಿ ವಿದ್ಯಾರ್ಥಿಜೀವನದಲ್ಲಿ ನಿರ್ಧಾರ, ಸಾಧನೆ ಹಾಗೂ ಗುರಿ ಈ ಮೂರು ಅಂಶಗಳು ನಿಶ್ಚಿತವಾದಲ್ಲಿ ಆ ವಿದ್ಯಾರ್ಥಿಯ ಬದುಕು ಪರಿಪೂರ್ಣವಾಗುತ್ತದೆಎಂದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ಸಂಸ್ಥೆಯಅಧ್ಯಕ್ಷ ನಾರಾಯಣ ಸೋಮಯಾಜಿ ವಹಿಸಿದರು.
ವೇದಿಕೆಯಲ್ಲಿಶೃತಿ ಎಂ.ಬಸವರಾಜ್,ಸಂಸ್ಥೆಯ ಸಂಚಾಲಕರದಡಾ| ಪ್ರಭಾಕರ ಭಟ್‍ಕಲ್ಲಡ್ಕ, ಡಾ| ಕಮಲಾ ಪ್ರಭಾಕರ ಭಟ್‍ಕಲ್ಲಡ್ಕ ಉಪಸ್ಥಿತರಿದ್ದರು.
ಅಂತಿಮ ವಿಭಾಗದ ವಿದ್ಯಾರ್ಥಿಗಳು ಪದವಿ ವಿದ್ಯಾರ್ಥಿಜೀವನದ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿಅಂತಿಮ ವರ್ಷದ ವಿದ್ಯಾರ್ಥಿಗಳು ದ್ವಿತೀಯವರ್ಷದ ವಿದ್ಯಾರ್ಥಿಗಳಿಗೆ ಜವಬ್ದಾರಿಯ ಸಂಕೇತವಾದ ದೀಪವನ್ನು ಹಸ್ತಾಂತರ ಮಾಡಿದರು.
ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದಕಾಯರ್‍ಕಟ್ಟೆಸ್ವಾಗತಿಸಿ, ವಿದ್ಯಾರ್ಥಿನಿ ಸವಿತಾವಂದಿಸಿ, ಸ್ವಾತಿಕಾರ್ಯಕ್ರಮ ನಿರೂಪಿಸಿದರು.


