ಬಂಟ್ವಾಳ : ಸಜಿಪ ಮುನ್ನೂರು ಗ್ರಾಮದ ರಾಜನ್ ದೈವ ಮುದೆಲ್ ಮುಟ್ಟಿ ನಾಲ್ಕೈತ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಸಾನದ ಮೆಚ್ಚಿಜಾತ್ರೆಯ ಅಂಗವಾಗಿ ಚಪ್ಪರ ಮುಹೂರ್ತವನ್ನು ನೆರವೇರಿಸಲಾಯಿತು. ಧಾರ್ಮಿಕ ವಿಧಿ ವಿಧಾನಗಳನ್ನು ಎಂ.ಸುಬ್ರಹ್ಮಣ್ಯ ಭಟ್ ನೆರವೇರಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ, ಪದಾಧಿಕಾರಿಗಳಾದ ಸಚ್ಚಿದಾನಂದ ಖಂಡೇರಿ, ಎಂ.ಪರಮೇಶ್ವರ , ನ್ಯಾಯವಾದಿ ದಿನೇಶ್ ಭಂಡಾರಿ, ಮನೋಜ್ ಆಳ್ವ, ಪ್ರಸಾದ್ ಶೆಟ್ಟಿ, ಶಿವರಾಮ ಬ್ರಾಸಿತ್ತಾಯ , ಮಾರಪ್ಪ ಕೊಟ್ಟಾರಿ, ಬಿ.ಮಹಾಬಲ ರೈ, ಚಿತ್ರಾಕ್ಷ ಶೆಟ್ಟಿ, ಶೀನ ಬಳ್ಳಾಲ , ರಮಾನಾಥ ಶೆಟ್ಟಿ, ಲಕ್ಷ್ಮಣ, ಸೀತಾರಾಮ ಮತ್ತಿತರರು ಉಪಸ್ಥಿತರಿದ್ದರು.

098
ರೂ.ಒಂದು ಕೋಟಿ ವೆಚ್ಚದಲ್ಲಿ ಶಿಲಾಮಯ ಸುತ್ತುಪೌಳಿ ನಿರ್ಮಿಸಿ ಎಪ್ರಿಲ್ 27ರಿಂದ ಮೇ2ರ ತನಕ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಸಾನದ ಮೆಚ್ಚಿ ಜಾತ್ರೆ ಜರಗಲಿದೆ.

By suddi9

Leave a Reply

Your email address will not be published. Required fields are marked *