ಮೂಡುಬಿದರೆ: ಮಾರೂರು ಗ್ರಾಮದ ಹೊಸಂಗಡಿ ಶ್ರೀ ಗೋಪಿನಾಥ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಸರ್ಕಾರದಿಂದ ರೂ. 10 ಲಕ್ಷ ಅನುದಾನವನ್ನು ದೊರಕಿಸಿ ಕೊಡುವುದಾಗಿ ರಾಜ್ಯ ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಭರವಸೆ ನೀಡಿದರು.
ಮಾರೂರು ಬಿರ್ನೊಟ್ಟುಗುಡ್ಡೆ ಶ್ರೀ ಕೊಡಮಣಿತ್ತಾಯ ಕ್ಷೇತ್ರದ ವರ್ಷಾವಧಿ ಜಾತ್ರೆಯ ಸಂದರ್ಭ ನಡೆದ ಸ್ಥಳೀಯ ಶ್ರೀ ಕುಂಭಕಂಠಿಣಿ ಸೇವಾ ಬಳಗದ ವಾರ್ಷಿಕೋತ್ಸವ ಹಾಗೂ ದಾನಿಗಳ ಸಹಕಾರದಿಂದ ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅನ್ನಛತ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀ ಕೊಡಮಣಿತ್ತಾಯ ದೈವ ಎಲ್ಲರೂ ನಂಬುವ ಶಕ್ತಿಯಾಗಿದೆ. ನಂಬಿದವರ ಸಂಕಷ್ಟವನ್ನು ದೂರಮಾಡಿ ಸುಖ ಸಮೃದ್ಧಿ ನೀಡುವ ಶಕ್ತಿ ಶ್ರೀ ದೈವಕ್ಕಿದೆ. ಸರಕಾರದ ಅನುದಾನ ಮತ್ತು ಪುರಸಭೆಯ ವತಿಯಿಂದ ಮಾರೂರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಲಾಗಿದ್ದು ಬಿರ್ನೊಟ್ಟುಗುಡ್ಡೆ ಕ್ಷೇತ್ರದ ರಸ್ತೆಯಲ್ಲಿ ಡಾಮರೀಕರಣ ಗೊಳ್ಳದೆ ಉಳಿದಿರುವ ಭಾಗದ ಡಾಮರೀಕರಣಕ್ಕೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆಯಿತ್ತರು.
ಹೊಸಂಗಡಿ ಅರಮನೆ ಸಂಪತ್ ಕುಮಾರ್ ಶೆಟ್ಟಿ ನೂತನ `ತೃಪ್ತಿ’ ಅನ್ನಛತ್ರವನ್ನು ಉದ್ಘಾಟಿಸಿದರು.

 


??????????
ಮಾರೂರು ಖಂಡಿಗ ವೇದಮೂರ್ತಿ ರಾಮದಾಸ ಆಸ್ರಣ್ಣರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶ್ರೀ ಕ್ಷೇತ್ರ ಪಡ್ಡ್ಯಾರ ಬೆಟ್ಟದ ಧರ್ಮದರ್ಶಿ ಎ. ಜೀವಂಧರ ಕುಮಾರ್ ಅವರು ಮಾತನಾಡಿ ಬಿರ್ನೊಟ್ಟುಗುಡ್ಡೆ ಕೊಡಮಣಿತ್ತಾಯ ಕ್ಷೇತ್ರ ಗ್ರಾಮಸ್ಥರ ಒಗ್ಗಟ್ಟಿನಿಂದಾಗಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಂಡಿದೆ ಎಂದರು.
ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಬೆಳ್ತಂಗಡಿ ತಾಲೂಕು ಎಪಿಎಂಸಿ ಅಧ್ಯಕ್ಷ ಧರಣೇಂದ್ರ ಕುಮಾರ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಪುರಸಭಾ ಸದಸ್ಯೆ ಹರಿಣಾಕ್ಷಿ ಎಸ್. ಸುವರ್ಣ ಉದ್ಯಮಿ ಪ್ರೇಮನಾಥ ಮಾರ್ಲ, ವಕೀಲ ಬಾವದಬೈಲು ಪದ್ಮಪ್ರಸಾದ್ ಜೈನ್, ಸೇವಾ ಬಳಗದ ಅಧ್ಯಕ್ಷ ಸುಶಾಂತ್ ಕರ್ಕೇರಾ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ ಸತ್ತಿಗೆ ಸೇವೆ ಸಲ್ಲಿಸುತ್ತಿರುವ ವಯೋವೃದ್ಧ ವಾಸು ಭಂಡಾರಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ದಾನಿಗಳಾದ ಉದ್ಯಮಿ ಪ್ರೇಮನಾಥ ಮಾರ್ಲ, ಮಾರೂರು ಗುತ್ತು ವಿಶ್ವನಾಥ ಶೆಟ್ಟಿ, ಚಾಮುಂಡೇಶ್ವರಿ ಫೈನಾನ್ಸ್‍ನ ಮಹಾಬಲ ಶೆಟ್ಟಿ, ಸದಾಶಿವ ಬಂಗಿಲ, ಮಾರೂರು ಖಂಡಿಗ ಪ್ರಸನ್ನ ಆಸ್ರಣ್ಣ, ಮಿತ್ತೊಟ್ಟು ಸುಧಾಕರ ಶೆಟ್ಟಿ, ಪ್ರಕಾಶ್ ದೇವಾಡಿಗ, ಲಿಂಗಪ್ಪ ಪೂಜಾರಿ, ಹೆಚ್ಚು ಅನುದಾನ ಒದಗಿಸುತ್ತಿರುವ ಪುರಸಭಾ ಸದಸ್ಯೆ ಹರಿಣಾಕ್ಷಿ ಸುವರ್ಣ ಅವರನ್ನು ಗೌರವಿಸಲಾಯಿತು.
ಶಂಕರ ಎ. ಕೋಟ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ವರದಿ ವಾಚಿಸಿದರು. ಸುನಿಲ್ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಮನೀಶ್ ಶೆಟ್ಟಿ ಪ್ರಾರ್ಥಿಸಿದರು.
ಸಭಾ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ರಾಮಕೃಷ್ಣ ಕಾಟುಕುಕ್ಕೆ ಬಳಗದವರಿಂದ `ದಾಸವಾಣಿ- ಭಕ್ತಿ ರಸಸಂಜೆ’ ಕಾರ್ಯಕ್ರಮ ಜರಗಿತು. ಉಮೇಶ್ ಭಟ್ ಪಡ್ಡಂದಡ್ಕ ದಾಸವಾಣಿ ಕಾರ್ಯಕ್ರಮವನ್ನು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *