ರಾಕೇಶ್ ಮಲ್ಲಿ ಸಾರಥ್ಯದ ಅಖಿಲ ಭಾರತ ಆಹ್ವಾನಿತ ಪುರುಷರ-ಕಬಡ್ಡಿ ಆರಂಭ
ಮಂಗಳೂರು-: ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಸಾರಥ್ಯದಲ್ಲಿ ಆಯೋಜಿಸಲಾದ ಮೂರು ದಿನಗಳ ಬೀಚ್ ಮ್ಯಾಟ್ ಪೆÇ್ರ ಕಬ್ಬಡ್ಡಿ ಸ್ಪರ್ಧೆ-2016 ಉದ್ಘಾಟನಾ ಸಮಾರಂಭವು ಇಂದಿಲ್ಲಿ ಶುಕ್ರವಾರ ಕರ್ನಾಟಕ ರಾಜ್ಯದ ಕರಾವಳಿ ಮಂಗಳೂರು ಅಲ್ಲಿನ ಪಣಂಬೂರು ಕಡಲ ತೀರದಲ್ಲಿ ನೇರವೇರಿತು.
ಅಮೆಚೂರು ಕಬಡ್ಡೀ ಫೆಡರೇಷನ್ ಆಫ್ ಇಂಡಿಯಾ, ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಜಯಕರ್ನಾಟಕ ಇವುಗಳ ಸಹಯೋಗದಿಂದ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಬೆಂಗಳೂರು ಇದರ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಸಂಯೋಜನೆ ಯಲ್ಲಿ ಆಯೋಜಿಸಲಾಗಿದ್ದ ಬೀಚ್ ಮ್ಯಾಟ್ ಪೆÇ್ರ ಕಬ್ಬಡ್ಡಿ ಸ್ಪರ್ಧೆಯನ್ನು ಕರ್ನಾಟಕ ವಿೂನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದರು.

ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್, ವಿಧಾನ ಪರಿಷತ್ತ್ ಸದಸ್ಯ ಐವನ್ ಡಿ’ಸೋಜಾ, ಶಾಸಕರುಗಳಾದ ಸುನಿಲ್ ಕುಮಾರ್, ಮೊೈದಿನ್ ಬಾವಾ, ಡಿಕ್ಕಿ ದೇವು ಶೆಟ್ಟಿ, ಮಂಗಳೂರು ಮೇಯರ್ ಕೆ.ಹರಿನಾಥ್, ಡಾ| ಎಂ.ಮೋಹನ್ ಆಳ್ವ ಮೂಡಬಿದ್ರೆ ಅತಿಥಿüಗಳಾಗಿ, ಬಂಟ್ವಾಳ ಪುರಸಭಾ ಸಭೆಯ ಮಾಜಿ ಅಧ್ಯಕ್ಷ ಸದಾನಂದ ಮಲ್ಲಿ ಮತ್ತು ಸ್ವರ್ಣಲತಾ ಮಲ್ಲಿ ಅವರು ಕಲವೃಕ್ಷ ಹೊಡೆದು ಸಾಂಕೇತಿಕವಾಗಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಪ್ರಥಮ ಬಹುಮಾನ 2 ಲಕ್ಷ ರೂಪಾಯಿ, ದ್ವಿತೀಯ ಬಹುಮಾನ 1.25 ಲಕ್ಷ ರೂಪಾಯಿಹಾಗೂ ತೃತೀಯ ಹಾಗೂ ಚತುರ್ಥ ಸ್ಥಾನಗಳಿಗೆ ತಲಾ 25 ಸಾವಿರ ರೂಪಾಯಿ ಬಹುಮಾನ ಮೊತ್ತ, ಆಕರ್ಷಕ ಟ್ರೋಫಿ ನೀಡಲಾಗುತ್ತಿದ್ದು, ದೇಶದಾದ್ಯಂತದ ಸುಮಾರು ತಂಡಗಳು ಭಾಗವಹಿಸುತ್ತಿರುವ ಈ ಪಂದ್ಯಾಟದಲ್ಲಿ ಭಾಗವಹಿಸಿವೆ.
ತಂಡಗಳಲ್ಲಿ ಸೆಂಟ್ರಲ್ ರೈಲ್ವೆ ಮುಂಬಯಿ, ದೇನಾ ಬ್ಯಾಂಕ್ ಮುಂಬಯಿ, ಮಹಾರಾಷ್ಟ್ರ ಪೆÇಲೀಸ್ ಮುಂಬಯಿ, ಸಾಯಿ ಸೆಕ್ಯೂರಿಟಿಸ್ ಮುಂಬಯಿ, ಒಎನ್ಜಿಸಿ-ಡೆಲ್ಲಿ, ಭಾರತ್ ಪ್ರಿಂಟರ್ಸ್ ಚೆನೈ, ಐ-ಟೆಕ್ ಚೆನ್ನೈ, ಸೆಂಟ್ರಲ್ ರೈಲ್ವೆ ಹೆಡ್ ಕ್ವಾಟ್ರಸ್ ನವದೆಹಲಿ, ನಾಗಪುರ ಡಿಸ್ಟ್ರಿಕ್ಟ್, ಹೆಚ್ಎಎಲ್.ಬೆಂಗಳೂರು, ವಿಜಯಾ ಬ್ಯಾಂಕ್ ಬೆಂಗಳೂರು, ಎಸ್ಬಿಎಂ ಬೆಂಗಳೂರು, ಬಿಎಂಟಿಸಿ ಬೆಂಗಳೂರು, ಕೇರಳ ಸ್ಟೇಟ್ ತಂಡ, ವರುಣ್ ಟ್ರಾವೆಲ್ಸ್ ಬೆಳ್ತಂಗಡಿ, ಆಳ್ವಾಸ್ ಮೂಡಬಿದ್ರೆ, ಸ್ಫೋರ್ಟಿಂಗ್ ಉಳ್ಳಾಲ್, ಉಡುಪಿ ಜಿಲ್ಲಾ ತಂಡಗಳು ಭಾಗವಹಿಸಲಿವೆ. ಪಂಟ್ಯಾಟದಲ್ಲಿ ಜಗದೀಶ್ ಕನಾಡಿ, ಪ್ರಶಾಂತ್ ರೈ, ಸುಕೇಶ್ ಹೆಗ್ಡೆ, ಪ್ರಶಾಂತ್ ವಾಂಖ್ಡೇಡೆ, ಜೀವ್ ಕುಮಾರ್, ಶಬ್ಬೀರ್ ಬಾಬು ಮೊದಲಾದ ಪಟುಗಳು ಮುಂಬಯಿ ತಂಡವನ್ನು ಪ್ರತಿನಿಧಿಸಿರುವರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಗೌರವಾಧ್ಯಕ್ಷ ಅಮರನಾಥ ರೈ, ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಪದಾಧಿಕಾರಿಗಳಾದ ರತನ್ ಶೆಟ್ಟಿ, ಪುರುಷೋತ್ತಮ ಪೂಜಾರಿ, ಉದಯ ಚೌಟ, ಡಾ… ಮೋಹಿತ್ ಸುವರ್ಣ, ಕೆ.ಟಿ ಸುವರ್ಣ, ಚಂದ್ರಹಾಸ ಶೆಟ್ಟಿ, ನಾಮ್ದೇವ್ ರಾವ್, ಸುಧಾಕರ್ ರೈ, ಗಿರಿಧರ್ ಶೆಟ್ಟಿ, ರಮಾನಾಥ್ ವಿಟ್ಲ, ಹಸನಬ್ಬ ತುಂಬೆ, ಚಂದ್ರಶೇಖರ್ ಕರ್ಣ, ಸದಸ್ಯರುಗಳಾದ ಸತೀಶ್ ಭಂಡಾರಿ, ಯು.ಎನ್ ಹಸನಬ್ಬ, ರಣ್ದೀಪ್ ಕಾಂಚನ್, ಬೋರ್ಡ್ ರೆಫ್ರೀಗಳಾದ ಪ್ರೇಮನಾಥ್ ಉಳ್ಳಾಲ್, ಮೋನಪ್ಪ ಕುಳಾಯಿ ಸೇರಿದಂತೆ ಕಬ್ಬಡ್ಡಿ ಪುರಸ್ಕೃತ ಜಯರಾಮ ಶೆಟ್ಟಿ ಮುಂಬಯಿ, ಕಬ್ಬಡ್ಡಿ ಅಭಿಮಾನಿಗಳಾದ ಸ್ಟೀವನ್ ಡಿ’ಸೋಜಾ ಮೋಗರ್ನಾಡ್, ಮತ್ತಿತರ ಸಾವಿರಾರು ಸಂಖ್ಯೆಯ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ಪಂದ್ಯಾಟದ ಹಾದಿಯಲ್ಲಿ ಸ್ಥಾನೀಯ ನಂದನೇಶ್ವರ ದೇವಸ್ಥಾನದಲ್ಲಿ ಪೂಜೆ ನೇರವೇರಿಸಿ ಭವ್ಯ ಮೆರವಣಿಗೆಯೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಲಾಯಿತು.














